ಕರ್ನಾಟಕ ಹೊಸ ಡಿಜಿಪಿ ಯಾರು? ಕಾದು ನೋಡಿ

ಪ್ರಪ್ರಥಮ ಬಾರಿಗೆ ಹಂಗಾಮಿಯಾಗಿ ಹೊಸ ಡಿಜಿಪಿಯಾಗಿ ಎಸ್ ಟಿ ರಮೇಶ್ ಅವರನ್ನು ನೇಮಿಸಲಾಗಿದೆ ಎಂದು ಗೃಹಸಚಿವ ಆರ್ ಅಶೋಕ್ ಅವರು ಇಂದು ಸಂಜೆ ತಿಳಿಸಿದ್ದಾರೆ.
ಹೀಗಾಗಿ ಸರ್ಕಾರ ಡಿಜಿಪಿ ಸ್ಥಾನಕ್ಕೆ ಹಂಗಾಮಿಯಾಗಿ ಹಿರಿಯ ಅಧಿಕಾರಿಯನ್ನು ನೇಮಿಸುವುದು ಅಥವಾ ರಾಜ್ಯ ಮಹಾ ನಿರ್ದೇಶಕರ ಶ್ರೇಣಿಯಲಿರುವ ಹಿರಿಯ ಐಪಿಎಸ್ ಅಧಿಕಾರಿಗಳಾದ ಎಸ್.ಟಿ.ರಮೇಶ್, ಡಾ.ಡಿ.ವಿ.ಗುರುಪ್ರಸಾದ್ ( ಸಿಐಡಿ ಹಾಲಿ ಮಹಾನಿರ್ದೇಶಕ), ಎನ್.ಅಚ್ಯುತರಾವ್ ಅವರಲ್ಲಿ ಒಬ್ಬರಿಗೆ ಸ್ಥಾನ ನೀಡಬಹುದು.
ರೇಸ್ ನಲ್ಲಿರುವ ಇತರರು: ಡಿಜಿಪಿ ಸ್ಥಾನಕ್ಕೆ ಪ್ರಮುಖವಾಗಿ ಈಗಿರುವ ಹಿರಿಯ ಅಧಿಕಾರಿಗಳಾದ ಎಸ್.ಟಿ.ರಮೇಶ್, ಡಾ.ಡಿ.ವಿ.ಗುರುಪ್ರಸಾದ್, ಎನ್.ಅಚ್ಯುತ ರಾವ್ ಅಲ್ಲದೆ ಎ.ಆರ್.ಇನ್‌ಫೆಂಟ್ ಹಾಗೂ ಶ್ರೀವತ್ಸವರ ಹೆಸರು ಕೇಳಿಬರುತ್ತಿವೆ. ಆದರೆ ಸರಕಾರ ಇವರಲ್ಲಿ ಎಸ್.ಟಿ.ರಮೇಶ್, ಡಾ.ಡಿ.ವಿ.ಗುರುಪ್ರಸಾದ್, ಎನ್.ಅಚ್ಯುತರಾವ್‌ರಲ್ಲಿ ಒಬ್ಬರನ್ನು ನೇಮಿಸಲು ಮುಂದಾಗಿದೆ.
ಸಿಎಟಿ ತಡೆಯಾಜ್ಞೆ: ಪೊಲೀಸ್ ಮಹಾನಿರ್ದೇಶಕರ ಸ್ಥಾನಕ್ಕೆ ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನು ಪರಿಗಣಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಸಿಎಟಿ (ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ) ಮನವಿ ಮಾಡಿರುವುದರಿಂದ ನೇಮಕಾತಿಗೆ ಸಿಎಟಿ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ ಎಡಿಜಿಪಿ ಶ್ರೇಣಿಯಲ್ಲಿ 9ಕ್ಕೂ ಹೆಚ್ಚು ಅಧಿಕಾರಿಗಳು ಸ್ಪರ್ಧಿಗಳಾಗುತ್ತಾರೆ.
ಗೃಹ ಸಚಿವ ಆರ್ ಅಶೋಕ್ ನೇತೃತ್ವದ ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಗೃಹ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಡಿಜಿ ಹಾಗೂ ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನು ಪರಿಗಣಿಸಿ ಹೆಸರು ಅಂತಿಮಗೊಳಿಸುವ ಸಾಧ್ಯತೆಯಿದೆ. ತಡೆಯಾಜ್ಞೆ ತೆರವುಗೊಂಡ ಮೇಲೆ ಹೊಸ ಡಿಜಿಪಿ ದರ್ಶನ ಭಾಗ್ಯ ಸಾಧ್ಯ. [ಅಜಯ್ ಕುಮಾರ್ ಸಿಂಗ್]











Click it and Unblock the Notifications