ಮಾಜಿ ಸಿಇಓ ರಾಮದೊರೈ ಪಿಎಂ ಅಡ್ವೈಸರ್?
ನವದೆಹಲಿ,
ಜ. 30 : ಟಾಟಾ ಕನ್ಸ್ ಲ್ಟನ್ಸಿ ಸರ್ವೀಸ್(ಟಿಸಿಎಸ್) ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮದೊರೈ ಅವರು ಪ್ರಧಾನಮಂತ್ರಿಗಳ ಸಲಹೆಗಾರರಾಗಿ ನೇಮಕ ಆಗುವ ಸಾಧ್ಯತೆ ಇದೆ. id="toptextpromo">ದೇಶದ
ದೊಡ್ಡ ಸಾಫ್ಟ್ ವೇರ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಿಸಿಎಸ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ 2009ರಲ್ಲಿ ಅವರು ನಿವೃತ್ತಿಯಾಗಿದ್ದಾರೆ. ಟಾಟಾ ಗ್ರೂಪ್ ಸೇರಿದಂತೆ ಅನೇಕ ಸಾಫ್ಟ್ ವೇರ್ ಕಂಪನಿಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಸಲಹೆಗಾರರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಈ ಹುದ್ದೆ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಸಮನಾಗಿರುತ್ತದೆ ಎಂದು ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವಆರ್ಥಿಕ ಸಮ್ಮೇಳನದಲ್ಲಿ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೆಹಲಿ
ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪದವಿ ಪಡೆದಿರುವ ಅವರು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಎಲೆಕ್ಟ್ರಾನಿಕ್ ಅಂಡ್ ಟೆಲಿಕಮ್ಯುನಿಕೇಷನ್ ನಲ್ಲಿ ಇಂಜಿಯನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಇನ್ಫೋಸಿಸ್ ನ ನಂದನ್ ನಿಲೇಕಣಿ ಅವರು ಆಧಾರ್ ಗುರುತಿನ ಚೀಟಿ ಕಾರ್ಯಕ್ರಮಕ್ಕೆ ಮುಖ್ಯಸ್ಥರನ್ನಾಗಿ ಮನಮೋಹನ್ ಸಿಂಗ್ ಸರಕಾರ ನೇಮಿಸಿರುವುದು ಗೊತ್ತಿರುವ ಸಂಗತಿ.











Click it and Unblock the Notifications