ಎಸ್ ಎನ್ ಸ್ಮಾರಕಕ್ಕೆ 5 ಕೋಟಿ ನೆರವು : ಸಿಎಂ
ಚಿತ್ರದುರ್ಗ,
ಜ. 30 : ಕರ್ನಾಟಕ ಏಕೀಕರಣದ ರೂವಾರಿ, ರಾಜಕೀಯ ಮುತ್ಸದ್ದಿ ದಿ ಎಸ್ ನಿಜಲಿಂಗಪ್ಪ ಅವರ ಸ್ಮಾರಕದ ಸಮಗ್ರ ಅಭಿವೃದ್ಧಿಗಾಗಿ ಸರಕಾರದಿಂದ 5 ಕೋಟಿ ರುಪಾಯಿ ನೆರವು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. id="toptextpromo">ನಿಜಲಿಂಗಪ್ಪ
ಸ್ಮಾರಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವಿತಾವಧಿಯಲ್ಲಿ ಜನರ ಹಿತ ಬಯಸಿ ಆಡಳಿತ ನಡೆಸಿದಂಥ ಧೀಮಂತ ನಾಯಕ ನಿಜಲಿಂಗಪ್ಪ ಅವರ ಸ್ಮಾರಕ ಸ್ಥಳದಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಸರಕಾರ ಸಂಪೂರ್ಣ ನೆರವು ನೀಡಲಿದೆ ಎಂದರು. ಪ್ರಾಮಾಣಿಕ ರಾಜಕಾರಣಿಯಾಗಿದ್ದ ನಿಜಲಿಂಗಪ್ಪ, ನಾಡಿನ ಅಭಿವೃದ್ಧಿಗಾಗಿ ನೀರಾವರಿ, ಕೃಷಿ, ಕೈಗಾರಿಕೆಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಿ ಮತ್ತು ದಿಕ್ಸೂಚಿಯಾಗಿ ಕೆಲಸ ಮಾಡಿದ್ದಾರೆ ಎಂದರು. id='are-slot-1' class='oiad oi-axt oiadv'> id='top-searched-articles'>ರಾಜಕೀಯ
ಮುತ್ಸದ್ದಿಯಾಗಿದ್ದ ನಿಜಲಿಂಗಪ್ಪ ತಮ್ಮ ಆಡಳಿತಾವಧಿಯಲ್ಲಿ ತಮಗಾಗಿ, ತಮ್ಮ ಕುಟುಂಬ ವರ್ಗದವರಿಗಾಗಿ ಏನ್ನನ್ನೂ ಮಾಡಿಕೊಳ್ಳದವರು. ಅಂತಹ ಒಬ್ಬ ಆದರ್ಶ ಜೀವಿಯನ್ನು ಇಂದಿನ ರಾಜಕಾರಣಿಗಳು ಅನುಸರಿಸುವ ಅಗತ್ಯವಿದೆ ಎಂದು ಕೇಂದ್ರ ಕಾರ್ಮಿಕ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.











Click it and Unblock the Notifications