ಉ.ಕ ಚರ್ಚ್ ದಾಳಿಯಲ್ಲಿ ಪುರೋಹಿತ್ ಕೈವಾಡ!

ಕರ್ನಾಟಕದಲ್ಲಿ ನಡೆದಿರುವ ಚರ್ಚ್ ದಾಳಿಯಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಯ ಕೈವಾಡವಿಲ್ಲ ಎಂದು ನ್ಯಾ. ಸೋಮಶೇಖರ ಅವರ ನೇತೃತ್ವದ ಆಯೋಗ ವರದಿ ನೀಡಿರುವ ಮರುದಿನವೇ, ಅದಕ್ಕೆ ವ್ಯತಿರಿಕ್ತವಾದಂತಹ ವರದಿ ಹೊರಬಿದ್ದಿದೆ.
ಬಲವಂತವಾಗಿ ಹಿಂದೂ ಧರ್ಮೀಯರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು 2008ರಲ್ಲಿ ಹುಬ್ಬಳ್ಳಿ-ಧಾರವಾಡ, ರಾಣೆಬೆನ್ನೂರು ಮತ್ತು ಯಲ್ಲಾಪುರದಲ್ಲಿ ಕ್ರೈಸ್ತ ಧರ್ಮೀಯರ ಮೇಲೆ ಮತ್ತು ಚರ್ಚುಗಳ ಮೇಲೆ ದಾಳಿ ಮಾಡಲಾಗಿತ್ತು.
ಈ ಕುರಿತಂತೆ ಮಾಲೆಗಾಂವ್ ಸ್ಫೋಟ ಪ್ರಕರಣಗಳಲ್ಲಿ ಬಂಧಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಕೂಡ ನೀಡಿರುವ ಹೇಳಿಕೆಯಲ್ಲಿ ಎಸ್ ಪಿ ಪುರೋಹಿತ್ ಅವರ ಕೈವಾಡವಿರುವುದು ಬೆಳಕಿಗೆ ಬಂದಿದೆ. ಮಾಲೆಗಾಂವ್ ಸ್ಫೋಟಕ್ಕಾಗಿ ಹಣ ಮತ್ತು ಸ್ಫೋಟಕಗಳನ್ನು ಪೂರೈಕೆ ಮಾಡಿದರೆಂಬ ಆರೋಪದ ಮೇಲೆ ಲೆ. ಕರ್ನಲ್ ಪುರೋಹಿತ್ ಕೂಡ ಬಂಧಿತರಾಗಿದ್ದಾರೆ. [ಚರ್ಚ್ ದಾಳಿ]












Click it and Unblock the Notifications