ರೇಷನ್ ಕಾರ್ಡ್ ಸಲ್ಲಿಸಿದರೆ ಮಾತ್ರ ಎಲ್ ಪಿ ಜಿ ಲಭ್ಯ

Submit copy of ration card to LPG distributor along with electricity bill
ಬೆಂಗಳೂರು, ಜ. 28 : ನೀವು ಬಡತನ ರೇಖೆಗಿಂತ ಮೇಲಿದ್ದರೆ ನಿಮ್ಮ ಎಲ್ ಪಿ ಜಿ ಡಿಸ್ಟ್ರಿಬ್ಯೂಟರಿಗೆ ರೇಷನ್ ಕಾರ್ಡ್ ಮತ್ತು ವಿದ್ಯುತ್ ಪಾವತಿಯ ನಕಲನ್ನು ಫೆ.9ರೊಳಗಾಗಿ ನೀಡತಕ್ಕದ್ದು. ಇಲ್ಲದಿದ್ದರೆ, ಸಿಲಿಂಡರಲ್ಲಿ ಗ್ಯಾಸ್ ಖಾಲಿಯಾದರೆ ಬೇರೆ ಸಿಲಿಂಡರ್ ದೊರೆಯಲಿಲ್ಲವೆಂದು ಗೋಳಾಡುವುದು ಖಚಿತ.

ಹೀಗೆಂದು ಆಹಾರ ಮತ್ತು ನಾಗರಿಕ ಸರಬರಾಜು, ಹಾಗು ಗ್ರಾಹಕ ವ್ಯವಹಾರಗಳ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದರ ಕುರಿತಂತೆ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ನೀಡಿದೆಯಂತೆ. ಈ ಸುದ್ದಿ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆದರೆ, ಗ್ರಾಹಕರು ಮಾತ್ರ ಇದರ ಬಗ್ಗೆ ಎಳ್ಳಷ್ಟೂ ತಿಳಿಯದೆ ಕಂಗಾಲಾಗಿದ್ದಾರೆ.

ಪಡಿತರ ಚೀಟಿ, ಎಲ್ ಪಿಜಿ ಗೊಂದಲ : ಸ್ಪಷ್ಟೀಕರಣ

ಸರಕಾರದ ಅಸಡ್ಡೆಯೋ, ಗ್ರಾಹಕರ ನಿರ್ಲಕ್ಷವೋ ಈ ಸುತ್ತೋಲೆಯ ವಿಷಯ ಸರಿಯಾದ ರೀತಿಯಲ್ಲಿ ಗ್ರಾಹಕರರಿಗೆ ತಲುಪದಿರುವುದು ಮಾತ್ರ ಸತ್ಯ ಸಂಗತಿ. ಪತ್ರಿಕೆಗಳಲ್ಲಿ ಓದಿ ಅಥವಾ ಅವರಿವರಿಂದ ತಿಳಿದು ಗ್ರಾಹಕರು ಮಾತ್ರ ಕೈಯಲ್ಲಿ ರೇಷನ್ ಕಾರ್ಡ್ ಮತ್ತು ವಿದ್ಯುತ್ ಪಾವತಿ ಕಾಪಿಗಳನ್ನು ಹಿಡಿದುಕೊಂಡು ಎಲ್ ಪಿ ಜಿ ಡಿಸ್ಟ್ರಿಬ್ಯೂಟರುಗಳೆದಿರು ಸಾಲುಗಟ್ಟಿ ನಿಂತಿದ್ದಾರೆ.

ಎಲ್ ಪಿ ಜಿ ಸಿಲಿಂಡರುಗಳ ಅಕ್ರಮ ಬಳಕೆಯನ್ನು ತಡೆಯುವ ಉದ್ದೇಶದಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಈಗಿನ ನಿಯಮಗಳ ಪ್ರಕಾರ ಎಲ್ ಪಿ ಜಿ ಸಿಲಿಂಡರ್ ಹೊಂದಿದವರ ಬಳಿ ರೇಷನ್ ಕಾರ್ಡ್ ಇರುವುದು ಅಗತ್ಯ. ರೇಷನ್ ಕಾರ್ಡ್ ಇಲ್ಲದವರು ಇತ್ತೀಚಿನ ವಿದ್ಯುತ್ ಬಿಲ್ ಕಟ್ಟಿದ ಪಾವತಿ ಸಲ್ಲಿಸಿದರೂ ಆಯಿತು. ರೇಷನ್ ಕಾರ್ಡ್ ಬೇಕೇನೋ ಸರಿ, ಆದರೆ ಅದು ಇಲ್ಲದವರು ವಿದ್ಯುತ್ ಪಾವತಿ ಸಲ್ಲಿಸಿದರೆ ಸಾಕೆಂದು ಡಿಸ್ಟ್ರಿಬ್ಯೂಟರುಗಳು ಹೇಳುತ್ತಿರುವ ಔಚಿತ್ಯವೇನು? ಇದು ಕೆಲ ಗ್ರಾಹಕರ ಪ್ರಶ್ನೆ.

ಈ ಸುದ್ದಿಯನ್ನು ಸರಿಯಾದ ರೀತಿಯಲ್ಲಿ ಗ್ರಾಹಕರಿಗೆ ತಲುಪದಂತೆ ಮಾಡಿರುವುದು ಕೂಡ ಅನೇಕ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಯ ದಿನಾಂಕ ಫೆ.9. ಮೊದಲು ಜ.29 ಕೊನೆ ದಿನಾಂಕ ನೀಡಲಾಗಿತ್ತು. ಆದರೆ, ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಇದರ ಬಗ್ಗೆ ಮಾಹಿತಿ ದೊರೆಯದಿದ್ದ ಕಾರಣ ಮತ್ತು ಗ್ರಾಹಕರ ಆಗ್ರಹದ ಮೇರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ.

ಏನೇ ಆಗಲಿ, ಕೂಡಲೆ ರೇಷನ್ ಕಾರ್ಡ್ ಮತ್ತು ವಿದ್ಯುತ್ ಪಾವತಿಯ ಜೆರಾಕ್ಸ್ ಪ್ರತಿಯನ್ನು ಗ್ಯಾಸ್ ಏಜೆನ್ಸಿಗೆ ಕೂಡಲೆ ಸಲ್ಲಿಸಿ. ರೇಷನ್ ಕಾರ್ಡ್ ನಕಲಿನ ಮೇಲೆ ಗ್ರಾಹಕ ಸಂಖ್ಯೆ, ನಿಮ್ಮ ಹೆಸರು ಮತ್ತು ವಿದ್ಯುತ್ ಬಿಲ್ ಮೇಲಿನ ಆರ್ಆರ್ ಸಂಖ್ಯೆ ನಮೂದಿಸುವುದನ್ನು ಮರೆಯಬೇಡಿ. [ಗ್ರಾಹಕ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+