ಕಪ್ಪು ಹಣದ ಮೂಲ ಬಹಿರಂಗಪಡಿಸಿ ಎಂದ ಸುಪ್ರೀಂ

Reveal source of black money: SC asks govt
ನವದೆಹಲಿ, ಜ. 27: ಸ್ವಿಸ್ ಬ್ಯಾಂಕ್ ಸೇರಿದಂತೆ ವಿದೇಶಿ ಬ್ಯಾಂಕ್ ಗಳಲ್ಲಿರುವ ಕಪ್ಪುಹಣದ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕ್ರಮಕ್ಕೆ ಸುಪ್ರೀಂ ಕೋರ್ಟ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದೆ. ಯುಪಿಎ ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಈ ಬಗ್ಗೆ ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದೆ. ಕಪ್ಪುಹಣ ಇಟ್ಟವರ ಸಂಪೂರ್ಣ ಜನ್ಮರಹಸ್ಯವನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ. ಈ ಬಗ್ಗೆ ವಿಚಾರಣೆಯನ್ನು ಫೆ.3ಕ್ಕೆ ಮುಂದೂಡಲಾಗಿದೆ.

ಸ್ವಿಸ್ ಬ್ಯಾಂಕ್ ನಲ್ಲಿರುವ ಅಪಾರ ಪ್ರಮಾಣದ ಅಕ್ರಮ ಹಣವನ್ನು ಹಿಂತೆಗೆದುಕೊಂಡು ಬರಲು ಕೇಂದ್ರ ವಿಫಲವಾಗಿದ್ದಕ್ಕೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ತೆರಿಗೆ ತಪ್ಪಿಸುವುದಕ್ಕಾಗಿ ಕಪ್ಪು ಹಣ ಜಮಾವಣೆ ಮಾಡಿರುವುದು ಗುರುತರ ಅಪರಾಧವಾಗಿದೆ. ದೇಶದಿಂದ ಹೊರಕ್ಕೆ ಹಣ ಠೇವಣಿ ಮಾಡುವುದರ ಉದ್ದೇಶ ತೆರಿಗೆ ವಂಚಿಸುವುದಾಗಿದೆ. ಇದು ಗಂಭೀರ ಅಪರಾಧ. ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದೇಕೆ? ಎಂದು ಕೋರ್ಟ್ ಪ್ರಶ್ನಿಸಿದೆ.

ವಿಡಿಯೋ:
ಕಪ್ಪುಹಣವುಳ್ಳ ಖದೀಮ ಬಯಲಿಗೆಳೆಯಿರಿ

ಹೆಸರು ಬಹಿರಂಗ ಇಲ್ಲ ಎಂದಿದ್ದ ಪ್ರಣಬ್: ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಕಪ್ಪು ಹಣದ ಮೂಲ ಆದಾಯದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು ಸೆಬಿ[SEBI]ಗೆ ಕೂಡಾ ಸೂಚಿಸಲಾಗಿದೆ. ಕೇಂದ್ರ ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜರ್ಮನಿಯ ಎಲ್ ಟಿಜಿ ಬ್ಯಾಂಕ್ ಯಲ್ಲಿರುವ ಭಾರತ ಮೂಲದ ಠೇವಣಿದಾರರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ವಿದೇಶಿ ಬ್ಯಾಂಕ್ ಗಳಲ್ಲಿ ಕಪ್ಪು ಹಣ ಇಟ್ಟ ಭಾರತೀಯರ ಹೆಸರನ್ನು ಬಹಿರಂಗ ಮಾಡಲು ಬರುವುದಿಲ್ಲ. ಹಾಗೆ ಮಾಡಿದರೆ ಆಯಾ ರಾಷ್ಟ್ರದೊಡನೆ ಮಾಡಿಕೊಂಡ ಒಪ್ಪಂದ ಮುರಿದಂತಾಗುತ್ತದೆ ಎಂದಿದ್ದರು.

ಭಾರತೀಯರು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿರುವ ಠೇವಣಿ ಮೊತ್ತ 65, 223 ಬಿಲಿಯನ್ ಎಂದು ಹೇಳಲಾಗಿದೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಮರಳಿ ತರಬೇಕು ಎಂದು ಮಾಜಿ ಕಾನೂನು ಸಚಿವ, ಪ್ರಮುಖ ನ್ಯಾಯವಾದಿ ರಾಮ್ ಜೇಠ್ಮಲಾನಿ, ಯೋಗ ಗುರು ಬಾಬಾ ರಾಮ ದೇವ್ ಹಾಗೂ ಭಾಜಪದ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ದನಿ ಎತ್ತಿದ್ದರು. [ಕಪ್ಪು ಹಣ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+