ಜಮ್ಮುವಿನಲ್ಲಿ ಯಾರು ಧ್ವಜ ಹಾರಿಸಲಿದ್ದಾರೆ?

Indian National flag
ಜಮ್ಮು, ಜ. 26: ಜಮ್ಮುವಿನಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಜೆಪಿ ನಾಯಕರನ್ನು ಜಮ್ಮುವಿನ ಒಳಗೆ ಬಿಡದಂತೆ ತಡೆಯಲು ಸ್ಥಳೀಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಜ್ಜಾಗಿದೆ.

ಪಂಜಾಬ್ ಪ್ರಾಂತ್ಯದ ಮಾಧೋಪುರ್ ಹಾಗೂ ಲಖನ್ ಪುರ ಸೇತುವೆ ಮೂಲಕ ತಿರಂಗಾ ಯಾತ್ರಾ ಪ್ರವೇಶಿಸಲು ಯತ್ನಿಸಿದಾಗ, ತಡೆ ಒಡ್ಡಲಾಗಿದೆ. ಆದರೆ, ನಾವು ನಾಳೆ ಧ್ವಜ ಹಾರಿಸಿಯೇ ಸಿದ್ಧ ಎಂದು ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ. ನಾವು ಮಾಡಿದ ತಪ್ಪಾದರೂ ಏನು. ಭಾರತದಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಬೇಡ ಎಂದಿದ್ದಾರೆ. ಟ್ವಿಟ್ಟರ್ ಮೂಲಕ ತ್ವರಿತವಾಗಿ ಸಂದೇಶ ರವಾನಿಸುತ್ತಾ ಗಮನ ಸೆಳೆದಿದ್ದಾರೆ.

ಇಂದು ಅರುಣ್ ಜೇಟ್ಲಿ, ಅನಂತ್ ಕುಮಾರ್ ಸೇರಿದಂತೆ ಸುಮಾರು 400 ರಿಂದ 500 ಜನ ಕಾರ್ಯಕರ್ತರನ್ನು ಬಂಧಿಸಲಾಗಿದೆ. ನಾಳೆ ದಿನ ಸಂಜೆ 4 ರ ತನಕ ಹಿರಿಯ ನಾಯಕರನ್ನು ಬಂಧನದಲ್ಲಿ ಇರಿಸುವ ಸಾಧ್ಯತೆಯಿದೆ.

ಜಮ್ಮು ಪ್ರವೇಶಿದಂತೆ ಬಿಜೆಪಿ ನಾಯಕರಿಗೆ ತಡೆ ಏಕೆ ?

ಸಮಸ್ಯೆ: ಶ್ರೀನಗರದ ಲಾಲ್ ಚೌಕ್ ಆವರಣದಲ್ಲಿ ಭಾರತದ ಗಣತಂತ್ರ ದಿನ(ಜ.26)ದಂದು ರಾಷ್ಟ್ರೀಯ ಧ್ವಜವನ್ನು ಹಾರಿಸುವುದು?

ಒಳಸಮಸ್ಯೆ: ಭಾರತದ ಬಾವುಟ ಹಾರಿಸುವುದು ಸಮಸ್ಯೆ ಆಗಿಲ್ಲ. ಜ.26ರಂದು ಸಿಆರ್ ಪಿಎಫ್ ಯೋಧರು ಗಣರಾಜ್ಯೋತ್ಸವ ದಿನದಂದು ಬಾವುಟ ಹಾರಿಸುತ್ತಾ ಬಂದಿದೆ. ಹಾಗೂ ಈ ಬಾರಿಯೂ ಹಾರಿಸಲಿದೆ. ಈಗಿನ ಸಮಸ್ಯೆ ಇರುವುದು ಲಾಲ್ ಚೌಕ್ ನಲ್ಲಿ ಬಿಜೆಪಿ ಬಾವುಟ ಹಾರಿಸಲು ತಡೆ ಒಡ್ಡಿರುವುದು.

ಒಮರ್ ವಾದ: ಬಿಜೆಪಿಯ ತಿರಂಗಾ ಯಾತ್ರೆ ರಾಜಕೀಯ ಪ್ರೇರಿತವಾಗಿದ್ದು, ಯಾತ್ರೆ ಜಮ್ಮು ಪ್ರವೇಶಿಸಿದರೆ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುತ್ತದೆ.

ಬಿಜೆಪಿ: ಭಾರತದ ಯಾವುದೇ ಮೂಲೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ನಮಗೆ ಹಕ್ಕಿದೆ.

ಮತ್ತೊಂದು ಸಮಸ್ಯೆ: ನೆಹರೂ ಕಾಲದಿಂದ ಬೆಳದು ಬಂದ..370ನೇ ವಿಧೇಯಕ.. ಪ್ರತ್ಯೇಕತಾವಾದಿಗಳಿಗೆ ಸಹಾಯಕವಾಗಿದ್ದು, ಭಾರತದ ಧ್ವಜದ ಅಡಿಯಡಿಯಲ್ಲಿ ಏಕತೆ ಮೂಡಿಸಲು ಪ್ರತ್ಯೇಕತಾವಾದಿಗಳು ಅವಕಾಶ ನೀಡುತ್ತಿಲ್ಲ

ಇತಿಹಾಸ: 1992ರಲ್ಲಿ ಆಗಿನ ಪಕ್ಷದ ಅಧ್ಯಕ್ಷರಾದ ಮುರಳಿ ಮನೋಹರ್ ಜೋಶಿ ಹಾಗೂ ನರೇಂದ್ರ ಮೋದಿ ಅವರು ಭಾರಿ ಮಿಲಿಟರಿ ಪಡೆಯ ಸರ್ಪಗಾವಲಿನಲ್ಲಿ ತ್ರಿವರ್ಣ ಧ್ವಜ ಹಾರಿಸಿತ್ತು. ಈಗ ಸುಮಾರು 11 ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷದ ತಿರಂಗಾ ಯಾತ್ರೆ ಯಶಸ್ವಿಯಾಗಿ ಪೂರೈಸಿದ್ದು ಜಮ್ಮುವಿನತ್ತ ಸಾಗಲು ಒಮರ್ ಪಡೆ ತಡೆಯೊಡ್ಡಿದೆ.

ಜಯ ಯಾರಿಗೆ: ಒಮರ್ ಅಬ್ದುಲ್ಲಾ, ಫಾರುಕ್ ಅಬ್ದುಲ್ಲಾ, ಯಾಸಿನ್ ಮಲ್ಲಿಕ್ ಅಥವಾ ಅರುಣ್ ಜೇಟ್ಲಿ, ಅನಂತ್ ಕುಮಾರ್ ಹಾಗೂ ಸುಷ್ಮಾ ಸ್ವರಾಜ್ ಗೂ ನಾಳೆ ತಿಳಿಯಲಿದೆ. ರಾಜ್ ನಾಥ್ ಸಿಂಗ್ ಉಪವಾಸ ಸತ್ಯಾಗ್ರಹ ನಿರತರಾಗಿದ್ದು, ಉಳಿದ ಹಿರಿಯ ನಾಯಕರು ಇದೇ ಮಾರ್ಗ ಅನುಸರಿಸುವ ಸಾಧ್ಯತೆಯಿದೆ. ಬಿಜೆಪಿ ಯುವ ಮೋರ್ಚಾ ತಡೆಯಲು ಜಮ್ಮು ಪೊಲೀಸರು ಸರ್ವಸಿದ್ಧರಾಗಿದ್ದಾರೆ. [ರಾಷ್ಟ್ರಧ್ವಜ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+