ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ಬಿಜೆಪಿ ಪರಿಶೀಲಿಸಲಿ
ಜಮ್ಮು,
ಜ. 20 : ಜಮ್ಮು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆ ಎದುರಾಗುವುದರಿಂದ ಗಣರಾಜ್ಯೋತ್ಸವ ದಿನದಂದು ಶ್ರೀನಗರದ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ರೂಪಿಸಿರುವ ಯೋಜನೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಕಾಶ್ಮೀರದ ಸಂಧಾನಕಾರರು ಬಿಜೆಪಿ ಮುಖಂಡರನ್ನು ಒತ್ತಾಯಿಸಿದ್ದಾರೆ. id="toptextpromo">ಭಾರತದ
ಧ್ವಜವನ್ನು ದೇಶದ ಯಾವುದೇ ಭಾಗದಲ್ಲಿ ಹಾರಿಸಿದರೂ ತಪ್ಪಲ್ಲ. ಆದರೆ, ಧ್ವಜಾರೋಹಣದ ಮೂಲಕ ಕಣಿವೆಯಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಅಥವಾ ಪ್ರಸ್ತುತದ ಸಂಧಾನ ಪ್ರಕ್ರಿಯೆಗಳಿಗೆ ಧಕ್ಕೆ ತರುವ ಸಾಧ್ಯತೆಗಳಿರುವುದರಿಂದ ಬಿಜೆಪಿ ತನ್ನ ರೂಪಿತ ಯೋಜನೆಯನ್ನು ಗಂಭೀರವಾಗಿ ಪರಿಶೀಲನೆ ನಡೆಸಬೇಕು ಎಂಬುದನ್ನು ಬಿಜೆಪಿ ನಾಯಕರಿಗೆ ಮನವರಿಕೆ ಮಾಡುತ್ತಿರುವುದಾಗಿ ಸಂಧಾನಕಾರರ ಸಮಿತಿಯ ಮುಖ್ಯಸ್ಥ ಪಡಗಾಂವ್ಕರ್ ಮಾಧ್ಯಮ ಪ್ರತಿನಿಧಿಗಳಿದೆ ವಿವರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜಮ್ಮು
ಕಾಶ್ಮೀರದಲ್ಲಿ ಪ್ರಸಕ್ತ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಅದನ್ನು ಹದಗೆಡಿಸಲು ಧ್ವಜಾರೋಹಣ ಕಾರ್ಯಕ್ರಮ ಕಾರಣವಾಗಬಾರದು. ನಮ್ಮ ಮನವಿಯನ್ನು ಬಿಜೆಪಿ ಪರಿಗಣಿಸಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಅವರು ಹೇಳಿದರು. ಸಮಿತಿ ನೀಡಿದ ಶಿಫಾರಸುಗಳಲ್ಲಿ ಕೆಲವನ್ನು ಕೇಂದ್ರ ಮತ್ತು ಕೆಲವನ್ನು ರಾಜ್ಯ ಸರಕಾರಗಳು ಜಾರಿಗೊಳಿಸುತ್ತಿವೆ. ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಮ್ಮ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಲು ಉತ್ಸಾಹ ತೋರುತ್ತಿದ್ದಾರೆ ಎಂದು ದಿಲೀಪ್ ಪಡಗಾಂವ್ಕರ್ ಹೇಳಿದರು.











Click it and Unblock the Notifications