ಅಪ್ಪ ಮಕ್ಕಳ ಹಗರಣದ ಸ್ಯಾಂಪಲ್ ಬಿಡುಗಡೆ : ಸಿಎಂ
ಹಾವೇರಿ,
ಜ. 16 : ಅಪ್ಪ ಮಕ್ಕಳ(ದೇವೇಗೌಡ-ಎಚ್ ಡಿ ಕುಮಾರಸ್ವಾಮಿ) ಭೂ-ಹಗರಣಗಳ ಸ್ಯಾಂಪಲ್ ಗಳನ್ನು ಇನ್ನೆರಡು ದಿನಗಳೊಳಗೆ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಜೊತೆಗೆ ಅವರಿಬ್ಬರೂ ಸಂಸದರಾಗಿರುವುದರಿಂದ ಎಲ್ಲ ದಾಖಲೆಗಳನ್ನು ರಾಷ್ಟ್ರಪತಿಗಳು, ಲೋಕಸಭಾಧ್ಯಕ್ಷ, ಪ್ರಧಾನಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾನೂನು ಉಲ್ಲಂಘಿಸಿ ಡಿನೋಟಿಫೈ ಮಾಡಿದ್ದಾರೆ. ಗೌಡರ ಕುಟುಂಬ ಮಾಡಿರುವಷ್ಟು ಆಸ್ತಿ ಬೇರಿನ್ಯಾರೂ ಮಾಡಿಲ್ಲ. ಇವರ ವ್ಯವಹಾರ ಮತ್ತು ಅಕ್ರಮಗಳ ದಾಖಲೆಗಳನ್ನು ರಾಜ್ಯದ ಜನತೆ ಮುಂದೆ ಇಡಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗೌಡರ
ಕುಟುಂಬ ಕೇವಲ ಸರಕಾರಿ ಜಮೀನು ಅಷ್ಟೇ ಅಲ್ಲದೇ ಹಾಸನ ಜಿಲ್ಲೆಯಲ್ಲಿ ಕೆರೆ ಅಂಗಳ, ಗೋಮಾಳ ಹಾಗೂ ಎಸ್ಸಿ, ಎಸ್ಟಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಆರೋಪಿಸಿದ ಅವರು, ತಮ್ಮ ವಿರುದ್ಧ ಜಾರ್ಜ್ ಶೀಟ್ ಮುದ್ರಣ ಮಾಡಿ ಲೋಕಸಭೆಯಲ್ಲಿ ಹಂಚುವುದಾಗಿ ಮಾಜಿ ಪ್ರಧಾನಿ ಹೇಳಿದ್ದಾರೆ. ಅವರು ಆ ಕೆಲಸವನ್ನು ಬೇಗ ಮಾಡಲಿ ಎಂದು ಟೀಕಿಸಿದರು.











Click it and Unblock the Notifications