ಶಬರಿಮಲೆ ದುರಂತ : ರಾಜ್ಯದ 30 ಸಾವು

ಬೆಂಗಳೂರು, ಬೆಳಗಾವಿ, ಮೈಸೂರು, ಹಾಸನ, ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಶಬರಿಮಲೆಗೆ ತೆರಳಿದ್ದರು. ಬೆಳಗಾವಿಯ ಗೋಕಾಕ್‌ನಿಂದ ತೆರಳಿದ್ದ 45 ಮಂದಿ ಘಟನೆ ಸಂಭವಿಸಿದ ಬಳಿಕ ನಾಪತ್ತೆಯಾಗಿದ್ದು, ಈ ಪೈಕಿ 9 ಮಂದಿಯ ಶವಗಳು ಪತ್ತೆಯಾಗಿವೆ.
ಮೃತರ ವಿವರ
ಪುರುಷೋತ್ತಮ ಬಾಳಪ್ಪ(53), ಬಸವರಾಜ ಫಕೀರಪ್ಪ(19), ಪ್ರಮೋದ ದೊಡ್ಡಣ್ಣ(35), ಚಂದ್ರಶೇಖರ ಲಕ್ಷ್ಮಪ್ಪ(28), ಪ್ರಕಾಶ ಯಲ್ಲಪ್ಪ(35), ಸಿದ್ಧರಾಮಪ್ಪ ಮಲ್ಲಪ್ಪ(16), ಚಂದ್ರಕಾಂತ್ ಬೋಸ್ಲೆ(25) ಶ್ರೀನಿವಾಸ್ ಶೆಟ್ಟಿ(35), ಮಂಜುನಾಥ್(45), ನಾಗಾರ್ಜುನ್(22), ವೀರಣ್ಣಸ್ವಾಮಿ(45), ಮಹಾಬಲೇಶ್ವರ(24), ಮಂಜುನಾಥ ಕಡೇದ(21), ಶಿವಲಿಂಗಯ್ಯ(15), ಮಂಜುನಾಥ ಗಂಟಿ(12), ಕೃಷ್ಣ(38), ಹರೀಶ್(12), ಸುರೇಶ್(19), ವೆಂಕಟಸ್ವಾಮಿ(35), ಮಂಜುನಾಥ್(34), ಮಂಜುನಾಥ್(27), ತಿಪ್ಪೇರುದ್ರಪ್ಪ(26), ಮೆಹಬೂಬ್(22) ಮತ್ತು ವಿಷ್ಣುಮೂರ್ತಿ(25) ಎಂದು ಗುರುತಿಸಲಾಗಿದೆ.
ವಿಶೇಷ ವಿಮಾನದ ಮೂಲಕ ಇಂದು ಮೃತ ದೇಹಗಳನ್ನು ರಾಜ್ಯಕ್ಕೆ ತರುವ ಸಾಧ್ಯತೆಗಳಿವೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಕೇರಳ ಸರಕಾರಗಳು ನಿಯಂತ್ರಣ ಕೊಠಡಿಗಳನ್ನು ಆರಂಭಿಸಿದ್ದು, ಘಟನೆಗೆ ಸಂಬಂಧಿಸಿ ಹಾಗೂ ಮೃತರು, ಗಾಯಾಳುಗಳ ಕುರಿತು ದೂರವಾಣಿಯ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಕೇರಳದ ಶಬರಿಮಲೆಗೆ ರಾಜ್ಯದಿಂದ ತೆರಳಿದ್ದ ಭಕ್ತರ ಪೈಕಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರುಪಾಯಿ ಹಾಗೂ ಗಾಯಾಳುಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಕೇಂದ್ರ ಸರಕಾರ ಮೃತರ ಕುಟುಂಬಕ್ಕೆ 1 ಲಕ್ಷ ಮತ್ತು ಗಾಯಗೊಂಡವರಿಗೆ 50 ಸಾವಿರ ರುಪಾಯಿಗಳನ್ನು ಘೋಷಿಸಿದೆ.(ಶಬರಿಮಲೆ)
ಬೆಂಗಳೂರು ನಿಯಂತ್ರಣ ಕೊಠಡಿ: 080-22215911, 22211177, 1800 4250 100.
ಕೇರಳದ ನಿಯಂತ್ರಣ ಕೊಠಡಿ: 04869 222049, 04869 252244, 04869 253456 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ.












Click it and Unblock the Notifications