ಪರಿಷತ್ ಉಪಸಭಾಪತಿಯಾಗಿ ವಿಮಲಾಗೌಡ ಆಯ್ಕೆ
ಬೆಂಗಳೂರು,
ಜ. 16 : ಜೆಡಿಎಸ್ ಶಾಸಕ ಪದಚ್ಯುತಿ ನಂತರ ಖಾಲಿಯಾಗಿದ್ದ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ ಶಾಸಕಿ ವಿಮಲಾಗೌಡ ಇಂದು ನಾಮಪತ್ರ ಸಲ್ಲಿಸಿದರು. ವಿಮಲಾಗೌಡ ಆಯ್ಕೆಯಾಗುವುದು ಖಚಿತವಾಗಿದ್ದು, ನಾಳೆ ಅಧಿಕೃತವಾಗಿ ಘೋಷಣೆಯಾಗಲಿದೆ. id="toptextpromo">ವಿಮಲಾಗೌಡ
ಅವಿರೋಧವಾಗಿ ಆಯ್ಕೆಯಾಗಲು ಸರಕಾರದ ಬಳಿ ಸಾಕಷ್ಟು ಶಾಸಕರ ಸಂಖ್ಯಾಬಲವಿದ್ದು, ಸೋಮವಾರ ನಡೆಯುವ ಅಧಿವೇಶನದಲ್ಲಿ ವಿಮಲಾಗೌಡ ಅವರ ಆಯ್ಕೆಯನ್ನು ಅಧಿಕೃತವಾಗಿ ಸರಕಾರ ಘೋಷಿಸಲಿದೆ. ಇಂದು ನಾಮಪತ್ರ ಸಲ್ಲಿದ ವಿಮಲಾಗೌಡ ಜೊತೆಗೆ ಗೃಹ ಸಚಿವ ಆರ್ ಅಶೋಕ್, ಸಂಸದ ಅನಂತ್ ಕುಮಾರ್, ಮಾಜಿ ಸಚಿವ ರಾಮಚಂದ್ರಗೌಡ ಉಪಸ್ಥಿತರಿದ್ದರು. id='are-slot-1' class='oiad oi-axt oiadv'> id='top-searched-articles'>ವಿಧಾನ
ಪರಿಷತ್ ಉಪಸಭಾಪತಿಯಾಗಿದ್ದ ಜೆಡಿಎಸ್ ಪಕ್ಷದ ಪುಟ್ಟಣ್ಣ ಅವರನ್ನು ಮತ ಹಾಕುವುದರ ಮೂಲಕ ಇತ್ತೀಚೆಗೆ ಪದಚ್ಯುತಿಗೊಳಿಸಲಾಗಿತ್ತು. ಆಗ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಾನೂನು ಬಾಹಿರವಾಗಿ ಪುಟ್ಟಣ್ಣ ಅವರನ್ನು ಉಪಸಭಾಪತಿ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ ನಡೆಯುವ ಅಧಿವೇಶನದಲ್ಲೂ ಆರೋಪ ಪ್ರತ್ಯಾರೋಪಗಳು ನಡೆಯುವ ಸಾಧ್ಯತೆ ಇದೆ.











Click it and Unblock the Notifications