ಶಬರಿಮಲೆ : ಕಾಲ್ತುಳಿತಕ್ಕೆ 102 ಭಕ್ತರ ಸಾವು

ಇಡುಕ್ಕಿ ಜಿಲ್ಲೆಯ ಪುಲಮೇಡು ಎಂಬಲ್ಲಿ ಸಂಭವಿಸಿದ ಅಪಘಾತ ಕಾಲ್ತುಳಿತದಲ್ಲಿ ಸಾಲು ಸಾಲು ಸಾವು ಸಂಭವಿಸಿವೆ. ಕೇರಳದ ಸರಕಾರಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಇದಾದ ನಂತರ ಜೀಪೋಂದು ಜನರ ಮೇಲೆ ಹಾಯ್ದು ಸಂಭವಿಸಿದ ಕಾಲ್ತುಳಿತಕ್ಕೆ 102ಕ್ಕೂ ಹೆಚ್ಚು ಜನ ಸಾವಿಗೀಡಾದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಅವರೆಲ್ಲರನ್ನು ಕೇರಳದ ಕೊಟ್ಟಾಯಂ, ಥೇಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತ್ತವರಲ್ಲಿ ಹೆಚ್ಚಿನವರು ತಮಿಳುನಾಡಿನವರಾಗಿದ್ದು, ಅಲ್ಲದೇ ಕೇರಳ ಕರ್ನಾಟಕದವರೂ ಮೃತಪಟ್ಟಿದ್ದಾರೆ. ಈ ಎಲ್ಲಾ ಭಕ್ತರು ಮಕರ ಜ್ಯೋತಿ ದರ್ಶನ ಪಡೆದ ನಂತರ ತಮ್ಮ ತಮ್ಮ ಊರುಗಳಲ್ಲಿ ಸಂಕ್ರಾಂತಿ ಆಚರಣೆ ಮಾಡುವ ಸಲುವಾಗಿ ಹಿಂತಿರುಗುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ.
ಸುಮಾರು ಒಂದೂವರೆ ಲಕ್ಷ ಭಕ್ತರು ಮಕರ ಜ್ಯೋತಿ ದರ್ಶಮ ಪಡೆದು ತಮ್ಮತಮ್ಮ ಊರುಗಳಿಗೆ ತೆರಳುತ್ತಿದ್ದರು. ಪೆರಿಯಾರ್ ಹುಲಿಧಾಮ ದಟ್ಟ ಅರಣ್ಯ ಬಳಿ ಈ ಘಟನೆ ನಡೆದಿದೆ. ತೀವ್ರ ದಟ್ಟನೆಯೇ ಮಧ್ಯೆಯೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಮೃತದೇಹಗಳನ್ನು ಹೊರತೆಗೆಯುವ ಕೆಲಸ ಆರಂಭವಾಗಿದೆ. ಪಾಂಡೀಚೆರಿಯ ಶವಗಾರದಲ್ಲಿ 100 ಶವಗಳನ್ನು ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೊಂದು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಮುಖ್ಯಮಂತ್ರಿಗಳಾದ ಅಚ್ಯುತ್ಯನಂದನ್, ಯಡಿಯೂರಪ್ಪ, ಕರುಣಾನಿಧಿ ದುರ್ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
* ಸಹಾಯವಾಣಿ, 04869-222049(ಕುಮುಲಿ ಪೊಲೀಸ್ ಠಾಣೆ), 0471-3243000,
* 0471-3244000,
* 0471-3245000,
* ಹೆದ್ದಾರಿ ಸಹಾಯವಾಣಿ-98461-00100,
* ಜಸ್ಟ್ ಡಯಲ್-6999-9999.
* ಬೆಂಗಳೂರು ಸಹಾಯವಾಣಿ- 080-2221 1177 ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ.












Click it and Unblock the Notifications