ಒಂಟಿ ಮಹಿಳೆಯ ಕೊಲೆ ಪ್ರಕರಣ : 7 ಬಂಧನ

ಮಂಜುನಾಥ್ (20), ರವಿ ಕಿರಣ್(20), ಅರ್ಜುನ(20),ಇಮ್ರಾನ್ ಪಾಷಾ(19) ಮತ್ತು ಸುಲೈಮಾನ್(22) ಅರಸಿಕೆರೆ ಮಲ್ಲಿಕಾರ್ಜನ್ (20), ಚಿತ್ರದುರ್ಗದ ಕಾರ್ತಿಕ್(20) ಬಂಧಿತರು.
ಬಂಧಿತ ಆರೋಪಿಗಳು ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಣ್ಯಾ 2 ನೇ ಹಂತದಲ್ಲಿರುವ ಮನೆಯೊಂದರಲ್ಲಿ ಒಂಟಿಯಾಗಿ ವಾಸವಾಗಿದ್ದ ಲಕ್ಷ್ಮಮ್ಮ ಎಂಬ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಆಕೆಯ ಮೇಲಿದ್ದ ಬಂಗಾರ ಒಡವೆ ಮತ್ತು 4 ಕೆಜಿ ತೂಕದ ಬೆಳ್ಳಿ ಸಾಮಾನುಗಳನ್ನು ದೋಚಿ ಪರಾರಿಯಾಗಿದ್ದರು.
ಮಂಜುನಾಥ್ ಎಂಬ ಆರೋಪಿ ಲಕ್ಷ್ಮಮ್ಮ ಅವರಿಗೆ ಸೇರಿದ್ದ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ. ಈತನ ಸ್ನೇಹಿತ ಕಾರ್ತಿಕ್ ಆಗಾಗ ಅಂಗಡಿಗೆ ಬರುತ್ತಿದ್ದ. ಲಕ್ಷ್ಮಮ್ಮ ಒಂಟಿಯಾಗಿ ಜೀವಿಸುತ್ತಿದ್ದ ಗಮನಿಸಿದ ಆರೋಪಿಗಳು ಅವರ ಹತ್ತಿರ ಚಿನ್ನಾಭರಣಗಳು ಇರುವುದನ್ನು ಖಚಿತಪಡಿಸಿಕೊಂಡು, ಮಂಜುನಾಥ್ ಮತ್ತು ಕಾರ್ತಿಕ್ ತನ್ನ ಇನ್ನಿತರ ಸ್ನೇಹಿತರೊಂದಿಗೆ ಸೇರಿ ಲಕ್ಷ್ಮಮ್ಮ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಆರೋಪಿಗಳ ಅನೇಕ ಕಳ್ಳತನದ ಪ್ರಕರಣಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.(ಕ್ರೈಂ)











Click it and Unblock the Notifications