15 ಶಾಸಕರ ಅಮಾನತಿಗೆ ಸಮಿತಿ ಶಿಫಾರಸ್ಸು

Speaker KG Bopaiah
ಬೆಂಗಳೂರು, ಜ. 14 : ಕಳೆದ ವರ್ಷ ಅಕ್ಟೋಬರ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ವಿಶ್ವಾಸಮತಯಾಚನೆ ವೇಳೆಯಲ್ಲಿ ವಿಧಾನಸಭೆಯಲ್ಲಿ ನಡೆದ ಗೊಂದಲಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದ ಸಮಿತಿ ಸಭಾಧ್ಯಕ್ಷರಿಗೆ ವರದಿ ನೀಡಿದ್ದು, ಪ್ರತಿಪಕ್ಷಗಳ 15 ಮಂದಿ ಶಾಸಕರನ್ನು ಅಮಾನತುಗೊಳಿಸುವಂತೆ ಶಿಫಾರಸ್ಸು ಮಾಡಿದೆ.

ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ ಅಪ್ಪಚ್ಚು ರಂಜನ್ ವರದಿಯನ್ನು ಸಭಾಧ್ಯಕ್ಷ ಕೆಜಿ ಬೋಪಯ್ಯ ಅವರಿಗೆ ನೀಡಿದರು. ಸದನದ ನಿಯಮಗಳನ್ನು ಗಾಳಿಗೆ ಅಗೌರವದಿಂದ ವರ್ತಿಸಿದ್ದ 8 ಮಂದಿ ಶಾಸಕರನ್ನು ಒಂದು ವರ್ಷ ಕಾಲ ಹಾಗೂ 7 ಮಂದಿ ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸುವ ಉದ್ದೇಶದಿಂದ ಅನುಚಿತ ವರ್ತನೆಯಲ್ಲಿ ತೊಡಗಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಇದು ಅರ್ಹವಾದ ಪ್ರಕರಣ ಎಂದು ಸಮಿತಿ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಶಾಸಕರನ್ನು ಅಮಾನತುಗೊಳಿಸಿದ ನಂತರ ಶಾಸಕರಾಗಿ ಪಡೆಯುವ ಸವಲತ್ತುಗಳನ್ನು ಸಹ ಅನರ್ಹಗೊಳಿಸಬಹುದು ಎಂದು ವರದಿ ಹೇಳಿದೆ.

ಜಮೀರ್ ಅಹ್ಮದ್ ಖಾನ್, ಎಂ ಟಿ ಕೃಷ್ಣಪ್ಪ, ಎಚ್ ಸಿ ಬಾಲಕೃಷ್ಣ, ಸಿಎಸ್ ಪುಟ್ಟರಾಜು, ಕಾಕಾ ಸಾಹೇಬ್ ಪಾಟೀಲ್, ರಹೀಂಖಾನ್, ಎನ್ ಎ ಹ್ಯಾರೀಸ್, ಯುಟಿ ಖಾದರ್ ಅವರನ್ನು ಒಂದು ವರ್ಷ ಮತ್ತು ಬಿಕೆ ಸಂಗಮೇಶ್, ಸುರೇಶಗೌಡ, ಎಚ್ ಪಿ ಮಂಜುನಾಥ್, ಬಂಡೆಪ್ಪ ಕಾಶೇಂಪುರ್, ಕೆ ರಾಜು, ಕೆಪಿ ಬಚ್ಚೇಗೌಡ ಅವರನ್ನು ಆರು ತಿಂಗಳ ಅವಧಿವರೆಗೆ ಅಮಾನತುಗೊಳಿಸಬೇಕು ಎಂದು ಸಮಿತಿ ಶಿಪಾರಸ್ಸು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+