ಆಡ್ವಾಣಿಯಿಂದ ಮತ್ತೆ ಜಿನ್ನಾ ಗುಣಗಾನ

ಪತ್ರಕರ್ತ ಎಂ ಜೆ ಅಕ್ಬರ್ ಅವರ 'ದಿ ಪಾಸ್ಟ್ ಅಂಡ್ ಫ್ಯೂಚರ್ ಆಫ್ ಪಾಕಿಸ್ತಾನ್" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅಡ್ವಾಣಿ, ದ್ವಿರಾಷ್ಟ್ರ ಸಿದ್ಧಾಂತವನ್ನು ಸೂಚಿಸಿದ ಮೌಲಾನ ಮೌದೂದಿ ಮತ್ತು ಸರ್ವಾಧಿಕಾರಿ ಜಿಯಾ ಉಲ್ ಹಕ್ ಅವರೇ ಪಾಕಿಸ್ತಾನದಲ್ಲಿನ ಇಂದಿನ ರಾಜಕೀಯ ಅಸ್ಥಿರತೆಗೆ ಕಾರಣ. ಜಿನ್ನಾ ಅವರು 'ಜಾತ್ಯತೀತ ವ್ಯಕ್ತಿ' ಎಂದು ಅಡ್ವಾಣಿ ಬಣ್ಣಿಸಿದ್ದಾರೆ.
ಪಾಕಿಸ್ತಾನದಲ್ಲಿನ ಅಸ್ಥಿರತೆ ನಿಜಕ್ಕೂ ಭಾರತಕ್ಕೆ ಕಳವಳ ತರುವ ಸಂಗತಿ. ಜಿನ್ನಾ ಪಾಕಿಸ್ತಾನದ ಪಿತಾಮಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಿನ್ನಾ ಅವರ ಮಕ್ಕಳು ಮೌದೂದಿ ಅವರ ಸೈದ್ಧಾಂತಿಕ ಉತ್ತರಾಧಿಕಾರಿಗಳನ್ನು ಮಣಿಸಿದಾಗಷ್ಟೇ ಪಾಕಿಸ್ತಾನ ಒಂದು ಸ್ಥಿರ ಮತ್ತು ಆಧುನಿಕ ರಾಷ್ಟ್ರವಾಗಬಲ್ಲದು ಎಂದು ಆಡ್ವಾಣಿ ಪತ್ರಕರ್ತ ಅಕ್ಬರ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಕ್ಕೆ 2005 ರಲ್ಲಿ ಭೇಟಿ ನೀಡಿದ್ದ ಸಮಯದಲ್ಲಿ ಮೊಹಮದ್ ಆಲಿ ಜಿನ್ನಾ ಕುರಿತು ಆಡ್ವಾಣಿ ನೀಡಿದ್ದ ಹೇಳಿಕೆ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೇಳಿಕೆಗೆ ತೀವ್ರ ಕೆಂಡಕಾರಿದ್ದ ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರ ಆಗ್ರಹದ ಮೇರೆ ಆಡ್ವಾಣಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸಂಘ ಪರಿವಾರ ಆಡ್ವಾಣಿ ಮೇಲೆ ಮೃದು ಧೋರಣೆ ತಾಳಿ 2008 ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.(ಎಲ್ ಕೆ ಅಡ್ವಾಣಿ)












Click it and Unblock the Notifications