ದೇವೇಗೌಡ ಕುಟುಂಬದ ವಿರುದ್ಧ ಸಿಎಂ ವಾಗ್ದಾಳಿ
ಬೆಂಗಳೂರು,
ಜ. 11: ಅಪ್ಪ ಮಕ್ಕಳ ಚರಿತ್ರೆ ಬಿಚ್ಚಿಡುತ್ತೇನೆ. ದೇವೇಗೌಡರ ಕುಟುಂಬದ ಹಗರಣಗಳನ್ನು ಬಹಿರಂಗಪಡಿಸುತ್ತೇನೆ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ ನಿಮ್ಮಂದ ನಾನು ಪಾಠ ಕಲಿಯಬೇಕಿಲ್ಲ. ನೀನೇನು ನನಗೆ ಉಪದೇಶ ಮಾಡ್ತೀಯಾ. ಗೌರವದಿಂದ ಮಾತನಾಡುವುದನ್ನು ಕಲಿತುಕೋ ಮೊದ್ಲು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. id="toptextpromo">ಅಧಿವೇಶನ
ಕಲಾಪ ಆರಂಭಗೊಂಡ ಕೂಡಲೇ ನಿಲುವಳಿ ಮಂಡನೆಗೆ ಸಭಾಧ್ಯಕ್ಷರ ರೂಲಿಂಗ್ ಪುನರ್ ಪರಿಶೀಲಿಸಲು ಆಗ್ರಹಿಸಿ ಪ್ರತಿಪಕ್ಷಗಳು ಧರಣಿ ಮುಂದುವರಿಸಿದವು. ಈ ಸಂದರ್ಭದಲ್ಲಿ ರೇವಣ್ಣ ಮಾಡಿದ ಆರೋಪದಿಂದ ಕೆಂಡಾಮಂಡಲವಾದ ಯಡಿಯೂರಪ್ಪ, ಕೆಎಂಎಫ್ ನಲ್ಲಿ 40ರಿಂದ 50 ಕೋಟಿ ರುಪಾಯಿಗಳಷ್ಟು ಅವ್ಯವಹಾರ ನಡೆದಿದೆ. ಎಸ್ ಎಂ ಕೃಷ್ಣ ಅವರಿಗೆ ಕೈಕೊಟ್ಟ ಅಪ್ಪ-ಮಕ್ಕಳಿಂದ ಬುದ್ಧಿ ಕಲಿಯುವ ಅವಶ್ಯಕತೆ ನನಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ರಾಜ್ಯದಲ್ಲಿ
ಎರಡೇ ಪಕ್ಷಗಳು ಇರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದು, ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೇವಣ್ಣ ಮಾಡಿದ ಟೀಕೆಗೆ ಯಡಿಯೂರಪ್ಪ ಈ ಪರಿ ಹರಿಹಾಯ್ದರು.(ಯಡಿಯೂರಪ್ಪ)











Click it and Unblock the Notifications