ಬೆಂಗಳೂರು : ಜ.16 ರಿಂದ ಕನ್ನಡ ಉತ್ಸವ
ಬೆಂಗಳೂರು,
ಜ. 12 : ನಗರದಲ್ಲಿರುವ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡ ವೇದಿಕೆಯು ಜ.16, 17 ಮತ್ತು 18 ಮೂರು ದಿನಗಳ ಕಾಲ ಕನ್ನಡ ಉತ್ಸವವನ್ನು ಹಮ್ಮಿಕೊಂಡಿದೆ. id="toptextpromo">ಜ.16
ರಂದು ಬೆಳಗ್ಗೆ 10.30ಕ್ಕೆ ಸಿಒಡಿ ಕಚೇರಿಯಿಂದ ಕನ್ನಡ ಉತ್ಸವದ ಮೆರವಣಿಗೆ ಆರಂಭವಾಗಲಿದೆ. ಗೃಹ ಸಚಿವ ಆರ್ ಅಶೋಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಸೇರಿದಂತೆ ಕನ್ನಡಪರ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ವೇದಿಕೆಯ ಮುಖ್ಯಸ್ಥ ಪ್ರಭಾಕರರೆಡ್ಡಿ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನಲ್ಲಿ
ಪರ ಭಾಷಿಗರ ಹಾವಳಿ ಹೆಚ್ಚಾಗಿದೆ. ಇರುವ ಕನ್ನಡಿಗರಲ್ಲಿ ಮಾತೃ ಭಾಷೆ ಬಗ್ಗೆ ನಿರಾಸಕ್ತಿ ಉಂಟಾಗಿದೆ. ನಾಡಿನ ಕಲೆ, ಸಾಹಿತ್ಯ,ಸಂಗೀತ, ಸಂಸ್ಕೃತಿ ಸೇರಿದಂತೆ ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಲು ಕನ್ನಡ ವೇದಿಕ ವಿದ್ಯಾರ್ಥಿ ಘಟಕ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ವಿವರಿಸಿದರು.











Click it and Unblock the Notifications