ನಿಲೇಕಣಿ, ಶ್ರೀಧರನ್ ಗೆ ಗೌರವ ಡಾಕ್ಟರೇಟ್
ಬೆಂಗಳೂರು,
ಜ. 10 : ಆಧಾರ್ ಗುರುತಿನ ಪತ್ರ ಪ್ರಾಧಿಕಾರ ಅಧ್ಯಕ್ಷ ನಂದನ್ ನಿಲೇಕಣಿ ಹಾಗೂ ನವದೆಹಲಿ ಮೆಟ್ರೋ ರೂವಾರಿ ಶ್ರೀಧರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಬೆಳಗಾವಿ ವಿಶ್ವೇಶ್ವಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಿರ್ಧರಿಸಿದೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ ಮಹೇಶ್ವರಪ್ಪ, ಫೆಬ್ರವರಿ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಹಾಗೂ ಪದಕ ಪ್ರದಾನ ಮಾಡಲಾಗುವುದು ಎಂದರು. ಘಟಿಕೋತ್ಸವದಲ್ಲಿ ರಾಜ್ಯಪಾಲರ ಎಚ್ ಆರ್ ಭಾರದ್ವಾಜ್ ಪಾಲ್ಗೊಳ್ಳಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಬಾರಿ 7 ಸಾವಿರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ, 45 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 10 ಚಿನ್ನದ ಪದಕಗಳನ್ನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜು ವಿದ್ಯಾರ್ಥಿ ಎಚ್ ಕೆ ಕಾರ್ತೀಕ್ ಪಡೆದುಕೊಂಡಿದ್ದಾರೆ. ಕಾಲೇಜು ವಿಭಾಗದಲ್ಲಿ ಬೆಂಗಳೂರಿನ ಬಿಎಂಎಸ್ ಸಿಇ ಪ್ರಥಮ ಸ್ಥಾನ ಗಳಿಸಿದೆ. ಇದೇ ಸಂದರ್ಭದಲ್ಲಿ ತಾಂತ್ರಿಕ ವಿವಿ ವ್ಯಾಪ್ತಿಯಲ್ಲಿ ಹೆಚ್ಚು ಅಂಕಗಳಿಸಿದವರ ಪಟ್ಟಿಯನ್ನು ಸಹ ಮಹೇಶ್ವರಪ್ಪ ಬಿಡುಗಡೆ ಮಾಡಿದರು.(ನಂದನ್ ನಿಲೇಕಣಿ)












Click it and Unblock the Notifications