ಹರಿಣಗಳ ಮೇಲೆ ಧೋನಿ ಪಡೆ ಭರ್ಜರಿ ಸವಾರಿ

ಗೆಲ್ಲಲು 169 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 147 ರನ್ ಮಾಡಿ ಸೋಲೊಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟ್ಸ್‌ಮನ್ ಮೋರ್ನ್ ವ್ಯಾನ್ ವೈಕೆ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಇರುವ 67 ರನ್ ಬಾರಿಸಿ ಭಾರತದ ಬೌಲರ್‌ಗಳ ಎದೆ ನಡುಗಿಸಿದರು. ಆದರೆಮ್ ವೈಕೆಗೆ ಇತರ ಆಟಗಾರರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ವಿಜಯದ ಗುರಿ ತಲುಪಲು ಸಾಧ್ಯವಾಗಲಿಲ್ಲ.
ವಿಜಯದ ಗುರಿಯನ್ನು ಬೆಂಬತ್ತುವ ಹಂತದಲ್ಲಿ ದಕ್ಷಿಣ ಆಫ್ರಿಕಾ 2ನೇ ಓವರ್‌ನ 2ನೇ ಎಸೆತದಲ್ಲಿ 1 ರನ್ ಮಾಡಿದ್ದ ಹಾಶಿಮ್ ಅಮ್ಲ ಅವರು ವೇಗಿ ನೆಹ್ರಾಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆದರೆ ಇವರೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಆಗಮಿಸಿದ್ದ ಮೋರ್ನ್ ವ್ಯಾನ್ ವೈಕೆ ಮಾತ್ರ ಗುಡುಗತೊಡಗಿದರು. ಆದರೆ ತಂಡದ ಮೊತ್ತ 31 ತಲುಪುವ ಹೊತ್ತಿಗೆ ಇಂಗ್ರಾಮ್ (2) ಅವರಿಗೆ ಮುನಾಫ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದರು.
ಎಬಿ ಡೆವಿಲಿಯರ್ಸ್ (14), ಡೇವಿಡ್ ಮಿಲ್ಲರ್ (10), ನಾಯಕ ಜೋನ್ ಬೋಥಾ (25), ವಯ್ನೆ ಪಾರ್ನೆಲ್ (14) ಎರಡಂಕಿಯ ಕೊಡುಗೆಯನ್ನು ತಂಡದ ಖಾತೆಗೆ ನೀಡಿದರು. ಆದರೆ ಡುಮಿನಿ (0) ಹಾಗೂ ಪೀಟರ್ಸನ್ (2) ಅವರಿಂದ ಹೆಚ್ಚಿನ ಕೊಡುಗೆ ಬರಲಿಲ್ಲ. ಭಾರತದ ಪರ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿ ಆಶೀಶ್ ನೆಹ್ರಾ 22ಕ್ಕೆ 2, ಯೂಸುಫ್ ಪಠಾಣ್ 22ಕ್ಕೆ 2 ವಿಕೆಟ್ ಪಡೆದರೆ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಆರ್.ಅಶ್ವಿನ್, ಯುವರಾಜ್ ಸಿಂಗ್ ತಲಾ 1 ವಿಕೆಟ್ ಪಡೆದರು.
ಟ್ವೆಂಟಿ 20 ಪಂದ್ಯದ ಸ್ಕೋರ್ ಕಾರ್ಡ್
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹವಾಗ್‌ರ ಅನುಪಸ್ಥಿತಿಯಲ್ಲಿ ಆಡಿದ ಭಾರತದ ರೋಹಿತ್ ಶರ್ಮರ ಆಕರ್ಷಕ ಅರ್ಧಶತಕ (34 ಎಸೆತಗಳಲ್ಲಿ 53 ರನ್), ಮತ್ತು ಸುರೇಶ್ ರೈನಾ (23 ಎಸೆತಗಳಲ್ಲಿ 41)ರ ನೆರವಿನಲ್ಲಿ ಭಾರತ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಮಾಡಿತ್ತು.
ಭಾರತದ ಉತ್ತಮ ಮೊತ್ತ:ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಭಾರತ 82 ನಿಮಿಷಗಳ ಆಟದಲ್ಲಿ ನಿಗದಿತ 20 ಓವರ್‌ಗಳಲ್ಲಿ 8.40 ಸರಾಸರಿಯಂತೆ 6 ವಿಕೆಟ್ ನಷ್ಟದಲ್ಲಿ 168 ರನ್‌ಗಳನ್ನು ಗಳಿಸಿತ್ತು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ (14) ಬೇಗನೆ ಔಟಾದರೆ, ಯುವರಾಜ್ ಸಿಂಗ್ (12), ಯೂಸುಫ್ ಪಠಾಣ್ (6), ಮಹೇಂದ್ರ ಸಿಂಗ್ ಧೋನಿ (10) ತಂಡದ ಖಾತೆಗೆ ತಮ್ಮಿಂದ ಸಾಧ್ಯವಿರುವ ಕೊಡುಗೆ ನೀಡಿ ವಿಕೆಟ್ ಒಪ್ಪಿಸಿದರು.
ರೋಹಿತ್ ಶರ್ಮರ ಆಕರ್ಷಕ ಅರ್ಧಶತಕ(34 ಎಸೆತಗಳಲ್ಲಿ 53 ರನ್) ಮತ್ತು ಸುರೇಶ್ ರೈನಾ (23 ಎಸೆತಗಳಲ್ಲಿ 41) ರ ವಿರಾಟ್ ಕೊಹ್ಲಿ (28) ಇವರ ಆಕರ್ಷಕ ಬ್ಯಾಟಿಂಗ್‌ನಿಂದಾಗಿ ಭಾರತ ದೊಡ್ಡ ಸ್ಕೋರ್ ದಾಖಲಿಸಿ, ದಕ್ಷಿಣ ಆಫ್ರಿಕಾವನ್ನು ಒತ್ತಡಕ್ಕೆ ಸಿಲುಕಿಸಿತ್ತು. ರಸ್ಟಿ ಥೇರೊನ್ 39ಕ್ಕೆ 2 ವಿಕೆಟ್, ಪಾರ್ನೆಲ್ , ಬೋಥಾ, ಡುಮಿನಿ 1 ವಿಕೆಟ್ ಕಬಳಿಸಿದರು. [ಟ್ವೆಂಟಿ20]
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications