ಶ್ರೀಕೃಷ್ಣ ವರದಿ : ಆಂಧ್ರಪ್ರದೇಶ ಮೂರು ತುಂಡು!

2010ರ ಫೆಬ್ರವರಿಯಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ಕುರಿತಂತೆ ಸಮಗ್ರ ವರದಿ ಸಲ್ಲಿಸುವಂತೆ ನ್ಯಾ. ಬಿಎನ್ ಶ್ರೀಕೃಷ್ಣ ನೇತೃತ್ವದ ಸಮಿತಿಗೆ ಕೇಂದ್ರ ಸರಕಾರ ಸೂಚಿಸಿತ್ತು. ಡಿಸೆಂಬರ್ 30 ರಂದು ಸಮಿತಿ 441 ಪುಟಗಳ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ತೆಲಂಗಾಣ ರಚನೆಗೆ ಸ್ಪಷ್ಟವಾಗಿ ಹೇಳದ ಸಮಿತಿ ಪ್ರಮುಖ ಅಂಶಗಳನ್ನು ಕೇಂದ್ರ ಸರಕಾರದ ಮುಂದಿಟ್ಟದೆ. ಅಖಂಡ ಆಂಧ್ರಪ್ರದೇಶ ಇರಬೇಕು ಎಂದು ಸಮಿತಿ ತನ್ನ ವೈಯಕ್ತಿಕ ಅಭಿಪ್ರಾಯವನ್ನು ಸಹ ತಿಳಿಸಿದೆ.
ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಕರೆದಿದ್ದ ವಿಶೇಷ ಸಭೆಗೆ ತೆಲಂಗಾಣ ರಾಷ್ಟ್ರೀಯ ಸಮಿತಿ, ತೆಲುಗ ದೇಶಂ ಪಾರ್ಟಿ ಮತ್ತು ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲ ಪಕ್ಷಗಳು ಸಭೆಗೆ ಹಾಜರಾಗಿದ್ದವು. ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷ ಚಿರಂಜೀವಿ ವರದಿಯನ್ನು ಸ್ವಾಗತಿಸಿದ್ದಾರೆ.
ಸಮಿತಿಯ ಪ್ರಮುಖ ಅಂಶಗಳು
* ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈಗಿರುವಂತೆ ಅಖಂಡ ಆಂಧ್ರಪ್ರದೇಶ ಹಾಗೆ ಮುಂದುವರಿಯಲಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನವನ್ನು ತೆಲಂಗಾಣ ಪ್ರದೇಶದ ನಾಯಕರಿಗೆ ನೀಡುವುದು ಉಚಿತ.
* ಸೀಮಾಂಧ್ರ ಮತ್ತು ತೆಲಂಗಾಣ ರಾಜ್ಯಗಳನ್ನು ಸೃಷ್ಟಿಸಿ, ತೆಲಂಗಾಣಕ್ಕೆ ಹೈದರಾಬಾದನ್ನು ರಾಜಧಾನಿಯನ್ನಾಗಿ ಘೋಷಣೆ ಮಾಡಿ.
* ತೆಲಂಗಾಣ ಪ್ರಾಂತ್ಯದ ಅಭಿವೃದ್ಧಿಯ ಉಸ್ತುವಾರಿ ನೋಡಿಕೊಳ್ಳುವ ತೆಲಂಗಾಣ ಸಮಿತಿ ರಚನೆ ಮಾಡಿ.
* ಆಂಧ್ರಪ್ರದೇಶ ರಾಜ್ಯವನ್ನು ಸೀಮಾಂಧ್ರ ಮತ್ತು ತೆಲಂಗಾಣ ಎಂದು ಎರಡು ಪ್ರತ್ಯೇಕ ರಾಜ್ಯಗಳಾಗಿ ವಿಭಜನೆ ಮಾಡಿ. ಹೈದರಾಬಾದ್ ನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಿ.
* ಆಂಧ್ರಪ್ರದೇಶದಿಂದ ಸೀಮಾಂಧ್ರ ಮತ್ತು ತೆಲಂಗಾಣ ಎಂದು ಪ್ರತ್ಯೇಕ ರಾಜ್ಯಗಳನ್ನು ಸೃಷ್ಟಿಸಿ. ಹೈದರಾಬಾದನ್ನು ಎರಡೂ ರಾಜ್ಯಗಳಿಗೆ ಸೇರಿಸುವ ಬದಲು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ.












Click it and Unblock the Notifications