ಹಗರಣ : ಅಧಿವೇಶನದಲ್ಲಿ ಹಣಾಹಣಿ ನಿರೀಕ್ಷೆ

Yeddyurappa-HD Kumaraswamy
ಬೆಂಗಳೂರು, ಜ. 6 : ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿರುವ ವಿಧಾನ ಮಂಡಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ಮಧ್ಯೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳ ಮಧ್ಯೆ ವಿಧಾನಮಂಡಲದ ಅಧಿವೇಶನ ಶುರುವಾಗಲಿದೆ.

ಮಧ್ಯಾಹ್ನ 12 ಗಂಟೆಗೆ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾತನಾಡಲಿದ್ದು, ಬಳಿಕ ಶುಕ್ರವಾರ ಬೆಳಗ್ಗೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿ ಸದನವನ್ನು ಮತ್ತೆ ಸೋಮವಾರಕ್ಕೆ ಮುಂದೂಡಲಾಗುವುದು.

ಅದಿವೇಶನ ನೆಟ್ಟಗೆ ನಡೆಯಲು ಬಿಡುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿರುವ ಜೆಡಿಎಸ್, ಸರಕಾರವನ್ನು ಮಣಿಸಲು ಬೇಕಿರುವ ಅಸ್ತ್ರಗಳನ್ನು ಬತ್ತಳಿಕೆಯಲ್ಲಿಟ್ಟುಕೊಂಡು ಸದನ ಪ್ರವೇಶ ಮಾಡಲಿದೆ. ಬಿಜೆಪಿ ಸರಕಾರದ ಹಗರಣಗಳನ್ನು, ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಸದನದೊಳಗೆ ಹೋರಾಟ ನಡೆಸುವ ಸಾಧ್ಯತೆ ಇದೆ. ಸದನದ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆಯುವುದು ಅಸಾಧ್ಯ ಎಂಬ ವಾತಾವರಣವನ್ನು ಪ್ರತಿಪಕ್ಷಗಳು ನಿರ್ಮಿಸಿವೆ.

11 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಒಟ್ಟು 8 ವಿಧೇಯಕಗಳು ಮಂಡನೆಯಾಗಲಿವೆ. ಆದರೆ, ಸದನದೊಳಗೆ ಪ್ರತಿಪಕ್ಷಗಳು ಕೋಲಾಹಲ ನಡೆಸಿದರೆ ವಿಧೇಯಕಗಳು ಮಂಡನೆಯಾಗುವ ಸಾಧ್ಯತೆಗಳಿಲ್ಲ. ಅಧಿವೇಶನವನ್ನು ಸುಸೂತ್ರವಾಗಿ ನಡೆಸುವ ಮೂಲಕ ಆರೋಗ್ಯಕರ ಚರ್ಚೆಗೆ ಪ್ರತಿಪಕ್ಷಗಳು ಅವಕಾಶ ಮಾಡಿಕೊಡಬೇಕು. ಗದ್ದಲ, ಘರ್ಷಣೆಗೆ ಸದನದೊಳಗೆ ಅವಕಾಶ ಮಾಡಿ ಕೊಡಬಾರದು. ಸದನದೊಳಗೆ ರಾಜ್ಯದ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದಿದ್ದಾರೆ ಅವರು ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.(ಯಡಿಯೂರಪ್ಪ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+