ಶಿಕಾರಿಪುರದ ಫೈನಾನ್ಸಿಯರ್ ನಿಗೂಢ ಸಾವು

ನಿನ್ನೆ ರಾತ್ರಿ ಅಂಗಡಿ ವ್ಯವಹಾರ ಮುಗಿಸಿಕೊಂಡು ವ್ಯಕ್ತಿಯೊಬ್ಬರೊಂದಿಗೆ ತಮ್ಮ ಬೈಕ್‌ನಲ್ಲಿ ಹೊರಟಿದ್ದಾರೆ. ಆದರೆ ಅವರು ಚಿನ್ನಕಟ್ಟೆ-ಜೋಗ ಸಮೀಪದ ರಸ್ತೆಯಲ್ಲಿ ಬೈಕ್ ಸಮೇತ ಬಿದ್ದಿದ್ದರು. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಅಂಬ್ಯುಲೈನ್ಸ್ ಚಾಲಕರೊಬ್ಬರು ಅವರನ್ನು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ತಲೆಗೆ ತೀವ್ರವಾಗಿ ಹೊಡೆತ ಬಿದ್ದ ಕಾರಣ, ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯದಲ್ಲಿಯೇ ಶ್ರೀನಿವಾಸ್ ಸಾವನ್ನಪ್ಪಿದ್ದಾರೆ. ಅವರ ಬಳಿಯಿದ್ದ ಮೊಬೈಲ್ ಮೂಲಕ ಅಂಬ್ಯುಲೈನ್ಸ್ ಚಾಲಕ ಅವರ ಪತ್ನಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಬಂಧಿಗಳು ಹೇಳಿದ್ದಾರೆ.
ಮೇಲ್ನೋಟಕ್ಕೆ ಇದು ರಕ್ತ ಅಪಘಾತದಿಂದ ಸಂಭವಿಸಿದ ಘಟನೆಯಲ್ಲವೆಂದು ಸಂಬಂಧಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇವರ ಸಾವಿನ ಸುತ್ತ ಹಲವು ಅನುಮಾನಗಳ ಹುತ್ತ ನಿರ್ಮಾಣವಾಗುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ. [ಕೊಲೆ]












Click it and Unblock the Notifications