ಮಹಾರಾಷ್ಟ್ರದಲ್ಲಿ 150 ಅಶ್ಲೀಲ ಎಮ್ಎಮ್ಎಸ್ ಸಿಡಿ ವಶ

MMS scandal in Maharashtra
ಮುಂಬೈ, ಜ. 05 : ಸುಲಭದಲ್ಲಿ ಮತ್ತು ವೇಗವಾಗಿ ಹಣ ಗಳಿಸಬೇಕೆಂಬ ಆಶೆ ಎಂಥ ಕೂಪಕ್ಕೆ ತಳ್ಳುತ್ತದೆಂಬುದನ್ನು ಮೈಮರೆತು ಶೀಲ ಕೆಡಿಸಿಕೊಂಡ ಅಮರಾವತಿಯ ಈ ಕಾಲೇಜು ಹುಡುಗಿಯರ ಕಥೆಯನ್ನು ಕೇಳಿಯೇ ತಿಳಿಯಬೇಕು.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ನಡೆಸಲಾದ ದಾಳಿಯಲ್ಲಿ ಕಾಲೇಜು ಹುಡುಗಿಯರು ಲೈಂಗಿಕ ಕ್ರೀಡೆಯಲ್ಲಿ ಭಾಗಿಯಾಗಿರುವ ಸುಮಾರು 150ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಕ್ಲಿಪ್ಪಿಂಗ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ದೊಡ್ಡ ಲೈಂಗಿಕ ಜಾಲವನ್ನು ಪತ್ತೆಹಚ್ಚಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕಿತ್ ಗುಪ್ತಾ ಎಂಬಾತನ ಮನೆ ಮತ್ತು ಮೊಬೈಲ್ ಅಂಗಡಿಯ ಮೇಲೆ ದಾಳಿ ಮಾಡಿದ ಪೊಲೀಸರು ಅಂಕಿತ್ ಮತ್ತು ಆತನ ಸಂಗಾತಿ ಲೊಕೇಶ್ ಗುಪ್ತಾ ಎಂಬಿಬ್ಬರನ್ನು ಬಂಧಿಸಿ ಅಶ್ಲೀಲ ಎಮ್ಎಮ್ಎಸ್ ಸಿಡಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಅಶ್ಲೀಲ ವಿಡಿಯೋಗಳಲ್ಲಿ ಭಾಗಿಯಾಗಿರುವವರು ಹೆಚ್ಚಾಗಿ ಕಾಲೇಜು ವಿದ್ಯಾರ್ಥಿನಿಯರು. ಸುಲಭದಲ್ಲಿ ಹಣ ಗಳಿಸುವ ಉಪಾಯ ಅವರನ್ನು ಇಂಥ ಅಪಾಯಕ್ಕೆ ತಳ್ಳಿದೆ. ಹುಡುಗಿಯರು ವಿದರ್ಭ ಮತ್ತು ಅಮರಾವತಿ ನಗರದವರು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಶೋಕಿಯ ಜೀವನಕ್ಕೆ ಮರುಳಾದ ಹುಡುಗ, ಹುಡುಗಿಯರು ಇಂಥ ಅಡ್ಡದಾರಿಗೆ ಇಳಿಯುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಒಂದೆಡೆ ತಮ್ಮ ಮಗ ಅಥವಾ ಮಗಳು ಚೆನ್ನಾಗಿ ಕಲಿಯುತ್ತಿದ್ದಾರೆಂದು ಕನಸು ಕಾಣುವ ಪಾಲಕರು, ಮತ್ತೊಂದೆಡೆ ಅವರ ಕನಸಿಗೆ ಎಳ್ಳುನೀರು ಬಿಡುವ ವಿವೇಚನೆಯಿಲ್ಲದ ಮಕ್ಕಳು! ಈ ಪ್ರಕರಣದಿಂದಲಾದರೂ ವಿದ್ಯಾರ್ಥಿನಿಯರು ಸರಿದಾರಿಯಲ್ಲಿ ನಡೆಯುವಂತಾಗಲಿ.

ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳು ಹಾದಿ ತಪ್ಪುತ್ತಿರುವುದರಿಂದ ಶಾಲಾ ಮಕ್ಕಳಂತೆ ಕಾಲೇಜುಗಳಲ್ಲಿಯೂ ಪಾಲಕರು ಮತ್ತು ಶಿಕ್ಷಕರ ಸಭೆ ನಡೆಸುವ ಚಿಂತನೆ ಬೆಂಗಳೂರಿನಲ್ಲಿಯೂ ನಡೆಯುತ್ತಿದೆ. ಕೆಲ ಕಾಲೇಜುಗಳಲ್ಲಿ ಸಿಸಿಟವಿಗಳನ್ನು ಕೂಡ ಅಳವಡಿಸಲಾಗಿದ್ದು, ಅಡ್ಡದಾರಿ ಹಿಡಿಯುವ ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿಡಲು ಈ ಕ್ರಮ ನಿಜಕ್ಕೂ ಅಗತ್ಯವಾಗಿದೆ. [ಎಮ್ಎಮ್ಎಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+