ಸಿಡಿಯಲ್ಲಿರುವುದು ರಂಜಿತಾ-ನಿತ್ಯಾ : ಇದು ಸತ್ಯ!

ಸಿಐಡಿ ಹೈದರಾಬಾದ್ ಹಾಗೂ ಚಂಡೀಗಡದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನಿತ್ಯಾನಂದನ ರಾಸಲೀಲೆ ಸೀಡಿಯನ್ನು ಪರೀಕ್ಷೆ ಕಳುಹಿಸಲಾಗಿತ್ತು. ಸೀಡಿಯಲ್ಲಿರುವುದು ನಿತ್ಯಾ-ರಂಜಿತಾ ಅಲ್ಲದೇ ಬೇರೆ ಯಾರೂ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರಯೋಗಾಲಯವು ನಿತ್ಯಾ-ರಂಜಿತಾ ಫೋಟೋಗಳನ್ನು ಇಟ್ಟುಕೊಂಡು ಪರೀಕ್ಷೆ ಮಾಡಿದೆ. ಕೊನೆಯದಾಗಿ ಸೀಡಿಯಲ್ಲಿರುವುದು ನಿತ್ಯಾ-ರಂಜಿತಾ ಎಂದು ಹೇಳಿದೆ. ಆದರೂ ಈ ವರದಿಯಲ್ಲಿ ದೋಷ ಕಂಡು ಬಂದಲ್ಲಿ ವಿದೇಶಿ ಪ್ರಯೋಗಾಲಯಗಳಲ್ಲೂ ಅಸಲೀತನದ ಬಗ್ಗೆ ತನಿಖೆ ನಡೆಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ನಟಿ ರಂಜಿತಾ, ನಿತ್ಯಾನಂದ ರಾಸಲೀಲೆಯ ಸೀಡಿಯಲ್ಲಿರುವುದು ನಾನಲ್ಲ. ನನಗೆ ಕೆಟ್ಟ ಹೆಸರು ತರಲು ಕೆಲವರು ಸಂಚು ರೂಪಿಸಿದ್ದಾರೆ. ಮುಖ್ಯವಾಗಿ ತಮಿಳುನಾಡಿನ ಒಬ್ಬ ರಾಜಕಾರಣಿ ಮತ್ತು ಕ್ರಿಶ್ಚಿಯನ್ ಮಿಷನರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿವೆ ಎಂದು ಗಂಭೀರ ಆರೋಪ ಮಾಡಿದ್ದರು.












Click it and Unblock the Notifications