ವಿಶ್ವಕಪ್ ತಂಡಕ್ಕೆ ಸದಸ್ಯನಾಗುವ ಹೆಬ್ಬಯಕೆ
ಬೆಂಗಳೂರು,
ಡಿ. 31 : 2011ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ನ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿರುವ ದಾವಣಗೆರೆ ಎಕ್ಸ್ ಪ್ರೆಸ್ ವಿನಯ್ ಕುಮಾರ್ ವಿಶ್ವಕಪ್ ನ ಅಂತಿಮ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. id="toptextpromo">15
ಸದಸ್ಯರ ತಂಡದಲ್ಲಿ ನಾನೊಬ್ಬನಾಗಬೇಕು ಎಂಬುದು ನನ್ನ ಏಕೈಕ ಗುರಿ. ವಿಶ್ವಕಪ್ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿರುವುದು ನಿಜಕ್ಕೂ ಸಂತಸ ತಂದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದಲೂ ತಂಡಕ್ಕೆ ನೆರವಾಗುವುದು ನನ್ನ ಮೊದಲ ಧ್ಯೇಯ. ಆರಂಭದಲ್ಲಿ ಆಲ್ ರೌಂಡರ್ ಆಗಿ ಆಡಲು ಆರಂಭಿಸಿದ್ದೆ. ನಂತರ ಬೌಲಿಂಗ್ ನತ್ತ ಹೆಚ್ಚು ಕೇಂದ್ರೀಕರಿಸಿದೆ. ಇದೀಗ ಎರಡೂ ಕಡೆಗೂ ಒತ್ತು ನೀಡುತ್ತಿದ್ದೇನೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಒಂದು
ವೇಳೆ ಅಂತಿಮ ತಂಡದಲ್ಲಿ ಸ್ಥಾನ ಪಡೆದರೆ ಫೆಬ್ರವರಿ 12 ಕ್ಕೆ 26ನೇ ವರ್ಷಕ್ಕೆ ಕಾಲಿರಿಸಲಿರುವ ಬಲಗೈ ಮಧ್ಯಮ ವೇಗಿ ವಿನಯ್ ಕುಮಾರ್ ಗೆ ಹುಟ್ಟುಹಬ್ಬದ ಕೊಡುಗೆಯೂ ಆಗಲಿದೆ.











Click it and Unblock the Notifications