ಚಿಕನ್ ಕರಿ ಮಾಡದ ಪತ್ನಿ ಕೊಂದ ಕುಡುಕ ಪಾಪಿ
ಬೆಂಗಳೂರು,
ಡಿ. 27: ಕುಡುಕ ಪತಿಯನ್ನು ಕಟ್ಟಿಕೊಂಡು 21 ವರ್ಷ ಸಂಸಾರ ಮಾಡಿದ ಕಷ್ಟ ಅನುಭವಿಸುತ್ತಿದ್ದ ಕಲಾವತಿ ಎಂಬುವರು, ಗಂಡನಿಗೆ ಬುದ್ಧಿವಾದ ಹೇಳಿದ್ದೆ ತಪ್ಪಾಯಿತು. ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪತಿರಾಯ, ಕುಡಿದ ಅಮಲಿನಲ್ಲಿ ಆಕೆಯ ಪ್ರಾಣ ಕಳೆದ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. id="toptextpromo">ನಗರದ
ನಾಗಮ್ಮ ನಗರ ನಿವಾಸಿ ಕಲಾವತಿ(38)ಮೃತಪಟ್ಟಿರುವ ದುರ್ದೈವಿ. ಆಕೆಯ ಗಂಡ ರಾಜು(42)ಕೊಲೆ ಆರೋಪಿ. ರಾಜು ಮತ್ತು ಕಲಾವತಿಗೆ ವಿವಾಹವಾಗಿ 21ವರ್ಷಗಳಾಗಿದ್ದವು. ಇವರಿಗೆ ಮೂರು ಮಕ್ಕಳಿದ್ದು, ಇವರು ಕೆ.ಪಿ.ಅಗ್ರಹಾರದ ಬಿನ್ನಿ ಮಿಲ್ ಕ್ಯಾಂಟೀನ್ ಹಿಂಭಾಗ ನಾಗಮ್ಮ ನಗರದಲ್ಲಿ ವಾಸವಾಗಿದ್ದರು. ಆರೋಪಿ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಹಿಂದಿರುಗುತ್ತಿದ್ದನು. ಈ ಸಂಬಂಧ ಪತಿ ಮತ್ತು ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅದೇ
ರೀತಿ ರಾಜು ಮದ್ಯಪಾನ ಮಾಡಿ ಶನಿವಾರ ರಾತ್ರಿ ಮನೆಗೆ ಹಿಂದಿರುಗಿ, ಚಿಕನ್ ಕರ್ರಿ ಮಾಡಿಕೊಡುವಂತೆ ಕೇಳಿದ್ದಾನೆ. ಇದಕ್ಕೆ ಆತನ ಪತ್ನಿ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳ ಉಂಟಾಗಿ ರಾಜು ತನ್ನ ಪತ್ನಿಯ ಕುತ್ತಿಗೆ ಮತ್ತು ಹೊಟ್ಟೆ ಮೇಲೆ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದನು. ಇದರಿಂದ ರಕ್ತ ವಾಂತಿ ಮಾಡಿಕೊಂಡ ಆಕೆ, ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. [ಕೊಲೆ]











Click it and Unblock the Notifications