Get Updates
Get notified of breaking news, exclusive insights, and must-see stories!

ಸಂಸದ ರಾಘವೇಂದ್ರರಿಂದ ಕ್ರಿಸ್ಮಸ್ ಕೇಕ್ ಹಂಚಿಕೆ

MP BY Raghavendra
ಶಿವಮೊಗ್ಗ, ಡಿ.24: ಶಿವಮೊಗ್ಗದ ಸಂತ ಥಾಮಸ್ ಸಮುದಾಯ ಭವನದಲ್ಲಿ ಡಿ. 27ರಂದು ಸೌಹಾರ್ದ ಕ್ರಿಸ್‌ಮಸ್‌ನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಕ್ರಿಸ್ತ ಒಕ್ಕೂಟದ ಅಧ್ಯಕ್ಷ ಬಿ.ಏಸುದಾಸ್ ತಿಳಿಸಿದರು. ಈ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದು, ಕ್ರಿಸ್‌ಮಸ್ ಕೇಕ್ ಸಮರ್ಪಣೆಯನ್ನು ಸಂಸದ ರಾಘವೇಂದ್ರರವರು ನೆರವೇರಿಸಲಿದ್ದಾರೆ. ಬಹುಮಾನ ವಿತರಣೆಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಭಾಗವಹಿಸಲಿದ್ದಾರೆ.

ಕ್ರಿಸ್ತ ಜಯಂತಿಯನ್ನು ಇತರೆ ಧರ್ಮಿಯರೊಂದಿಗೆ ಸೇರಿ ಆಚರಿಸಿ ಸಮಾಜದಲ್ಲಿ ಸಾಮರಸ್ಯ, ಸಮನ್ವಯತೆ ಕಾಯ್ದುಕೊಳ್ಳುವ ಘನ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕ್ರೈಸ್ತ ಧರ್ಮಿಯರಿಗೆ ಕಿರುಕುಳ ನೀಡುತ್ತಿರುವ ಸಂಘಟನೆಗಳಿಗೆ ಬುದ್ದಿಹೇಳುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖಂಡರಲ್ಲಿ ಮನವಿಯನ್ನು ಮಾಡುವುದಾಗಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕ್ರೈಸ್ತ ಸಮಾಜದವರು ಇತರೆ ಸಮಾಜದ ಮುಖ್ಯ ವಾಹಿನಿಯಲ್ಲಿ ಒಂದಾಗಿ ಇತರೆ ಧರ್ಮಿಯರೊಂದಿಗೆ ಸಮಾಜಮುಖಿಯನ್ನಾಗಿಸುವ ಅಪೇಕ್ಷೆಯನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧಕ್ಷತೆಯನ್ನು ಕ್ರೈಸ್ತ ಒಕ್ಕೂಟದ ಅಧಕ್ಷ ಬಿ.ಏಸುದಾಸ್ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್, ಶಿವಮೊಗ್ಗ ನಗರಸಭಾ ಅಧ್ಯಕ್ಷ ಕೆ.ಎಸ್.ಗಂಗಾಧರಪ್ಪ, ಜಿ.ಪಂ. ಅಧ್ಯಕ್ಷ ಹೆಚ್.ಸಿ.ಬಸವರಾಜಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಇವರೊಂದಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕ್ರಿಸ್ತ ಒಕ್ಕೂಟದ ಮುಖಂಡರಾದ ಡಿ.ಸಿ.ಪೀಟರ್, ಕ್ರಿಸ್ಟಫರ್, ಎಡ್ವರ್ಡ್ ಡಿಕಾಸ್ಟ, ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು. [ಕ್ರಿಸ್ಮಸ್]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+