ರಾಜ್ಯಪಾಲ-ಮೊಯ್ಲಿ ದಿಢೀರ್ ಭೇಟಿ ಏಕೆ?

ಗುರುವಾರ ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರನ್ನು ಭೇಟಿಯಾದ ವೀರಪ್ಪ ಮೊಯ್ಲಿ ಸುಮಾರು 45 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದ್ದಾರೆ. ರಾಜ್ಯ ಸರಕಾರ ಮತ್ತು ರಾಜ್ಯಪಾಲರ ನಡುವಿನ ವಾಕ್ಸಮರ, ಸರಕಾರಕ್ಕೆ ಬರೆದಿರುವ ಪತ್ರ, ಅದಕ್ಕೆ ಸಂಬಂಧಿಸಿ ಸರಕಾರ ಬರೆದ ಪ್ರತ್ಯುತ್ತರದ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಭವನದ ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಚರ್ಚೆ ಸಂಗತಿಯನ್ನು ಹಂಚಿಕೊಳ್ಳಲು ವೀರಪ್ಪ ಮೊಯ್ಲಿ ನಿರಾಕರಿಸಿದರು. ಸರಕಾರ ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರ, ಸ್ವಜನಪಕ್ಷ ಪಾತ, ಭೂ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲರೊಂದಿಗೆ ಮೊಯ್ಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೊಯ್ಲಿ ಅವರ ಈ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲವನನ್ನುಂಟು ಮಾಡಿದೆ.
ಭೂಹಗರಣ ಮತ್ತು ಗಣಿ ಹಗರಣಕ್ಕೆ ಸಂಬಂಧಿಸಿದಂತೆ ವಿವರಣೆ ಕೇಳಿ ರಾಜ್ಯಪಾಲರು ಸರಕಾರಕ್ಕೆ ಪತ್ರ ಬರೆದಿದ್ದರು. ಸರಕಾರ ನೀಡಿರುವ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದ ರಾಜ್ಯಪಾಲರು, ಬಹಿರಂಗವಾಗಿ ಟೀಕೆಗೆ ಇಳಿದಿದ್ದರು. ಜೊತೆಗೆ ರಾಜಭವನಕ್ಕೆ ಬನ್ನಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಮಂತ್ರಿಗಳು ಪಟ್ಟಿಯನ್ನು ನೀಡುವೆ ನೀಡುವೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಕಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಜ್ಯಪಾಲರ ವಿರುದ್ದ ರಾಷ್ಟ್ರಪತಿಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ.(ವೀರಪ್ಪ ಮೊಯ್ಲಿ)











Click it and Unblock the Notifications