ಟಪಾಲ್ ಆರೋಪಕ್ಕೆ ಉತ್ತರವೇನು ಯಡ್ಡಿಯವರೆ?

ಟಿಎನ್ನಾರ್ ಗಣಿ ಕಂಪನಿಯ ಟಪಾಲ್ ಗಣೇಶ್ ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ತಮ್ಮ ಆಡಳಿತ ಅವಧಿಯಲ್ಲಿ ಹೊಸದಾದ ಗಣಿಗಾರಿಕೆಗೆ ಅವಕಾಶ ನೀಡಲ್ಲ ಎಂದು ಮುಖ್ಯಮಂತ್ರಿಗಳು ಸುಳ್ಳು' ಹೇಳುತ್ತಲೇ 9 ಗಣಿ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಅರ್ಜಿ ರವಾನೆ ಮಾಡಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದಿರುವ ಮಾಹಿತಿಯನ್ನು ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿಗಳು ಬಳ್ಳಾರಿಯ ಗಣಿರೆಡ್ಡಿಗಳ ಬಿಗಿ ಹಿಡಿತದಲ್ಲಿ ಇರುವ ಕಾರಣ ಗಣಿಗಾರಿಕೆಗೆ ಒಪ್ಪಿಗೆ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ನೀಡಿದ್ದಾರೆ ಎಂದು ಆರೋಪಿಸಿರು.
ಶ್ರೀ ಮಾರ್ಕೆಟಿಂಗ್ ಕಾರ್ಪೊರೇಷನ್‌ಗೆ ಸಂಡೂರುನ ರಾಮಘಡ ಪ್ರದೇಶದ 10.52 ಹೆಕ್ಟೇರ್, ತುಂಗಭದ್ರಾ ಮೈನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ತಾರಾನಗರದ ಡಿಎಂ ಬ್ಲಾಕ್‌ನ 125.58 ಹೆಕ್ಟೇರ್, ಮೈಸೂರು ಮಿನರಲ್ಸ್‌ಗೆ ಹರಿಶಂಕರದ ಡಿಎಂ ಬ್ಲಾಕ್‌ನ 6.07 ಹೆಕ್ಟೇರ್, ಅಲ್ಲಂ ಬಸವರಾಜ್ ಅವರಿಗೆ ಹೊಸಪೇಟೆಯ ಜಂಬುನಾಥಹಳ್ಳಿ ವ್ಯಾಪ್ತಿಯ 21.86 ಹೆಕ್ಟೇರ್ ಪ್ರದೇಶ ನೀಡಲು ಶಿಫಾರಸು ಮಾಡಿದ್ದಾರೆ. ಇವೆಲ್ಲವೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಒಂದನೇ ಹಂತದ ಕ್ಲಿಯರೆನ್ಸ್ ಪಡೆದಿವೆ.
ಸಂಡೂರುನ ವೆಂಕಟಗಿರಿ ವ್ಯಾಪ್ತಿಯ 15.97 ಹೆಕ್ಟೇರ್ ಅನ್ನು ಎನ್. ಮನ್ಸೂರ್ ಅಹ್ಮದ್, ಹೊಸಪೇಟೆಯ ಕರಡಿಕೊಳ್ಳದ 20.23 ಹೆಕ್ಟೇರ್ ಅನ್ನು ವಿಯಾಮ್ ಪ್ರೈವೇಟ್ ಲಿಮಿಟೆಡ್, ವಿಠ್ಠಲಾಪುರಂನ 11.5 ಹೆಕ್ಟೇರ್ ಅನ್ನು ಎನ್. ರತ್ನಯ್ಯ ಅವರಿಗೆ, ಜೈಸಿಂಗ್‌ಪುರನ 39.7 ಹೆಕ್ಟೇರ್ ಅನ್ನು ಬಳ್ಳಾರಿ ಸ್ಟೀಲ್ಸ್ ಅಂಡ್ ಅಲಾಯ್ಸ್ ಲಿಮಿಟೆಡ್‌ಗೆ ಮತ್ತು ಅಪ್ಪೇನಹಳ್ಳಿ ವ್ಯಾಪ್ತಿಯ 196.46 ಹೆಕ್ಟೇರ್ ಮತ್ತು ಉಬ್ಬಳಗಂಡಿ ವ್ಯಾಪ್ತಿಯ 36.3 ಹೆಕ್ಟೇರ್ ಪ್ರದೇಶವನ್ನು ತುಂಗಭದ್ರಾ ಮಿನರಲ್ಸ್‌ಗೆ ನೀಡಲು ಶಿಫಾರಸು ಮಾಡಿದ್ದಾರೆ. ಇವೆಲ್ಲವೂ ರಾಜ್ಯ ಸರ್ಕಾರದಲ್ಲಿ 2ನೇ ಹಂತದ ಕ್ಲಿಯರನ್ಸ್ ಪಡೆದಿವೆ. [ಅಕ್ರಮ ಗಣಿಗಾರಿಕೆ]












Click it and Unblock the Notifications