ಆಟಿಕೆ ಗನ್ ಹಿಡಿದು ಬ್ಯಾಂಕ್ ದೋಚಲು ವಿಫಲ ಯತ್ನ

ನಕಲಿ ಪಿಸ್ತೂಲ್ ಹಿಡಿದುಕೊಂಡು ಬಂದ ಭೂಪನ ಹೆಸರು ಮನು (27). ಈತ ಹಾಸನ ಜಿಲ್ಲೆ ಚನ್ನರಾಯಪಟ್ಟಣದವನು.ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜ್ಞಾನಗಂಗಾನಗರ, ಮರಿಯಪ್ಪನಪಾಳ್ಯ ಎಂಬತ್ತು ಅಡಿ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಮಳಿಗೆ ಎಂಟ್ರಿ ಕೊಟ್ಟಿದ್ದಾನೆ. ಗ್ರಾಹಕನ ಸೋಗಿನಲ್ಲಿ ಬಂದ ಮನು, ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಜೊತೆ ಸುಮ್ಮನೆ ವಾಗ್ವಾದ ಶುರು ಮಾಡಿಕೊಂಡಿದ್ದಾನೆ. ನಂತರ ಮಳಿಗೆಯ ಶೆಟರ್ ಎಳೆದು ಕ್ಯಾಷಿಯರ್ ಬಳಿ ಹೋಗಿ, ಬ್ಯಾಗಿಗೆ ಹಣ ತುಂಬುವಂತೆ ಬೆದರಿಸಿದ್ದಾನೆ. ನಂತರ ಅಲ್ಲಿದ್ದ ಎಲ್ಲರಿಗೂ ಗನ್ ಹಾಗೂ ಬಾಂಬ್ ತೋರಿಸಿ ಹೆದರಿಸಿದ್ದಾನೆ.
ಕ್ಯಾಷಿಯರ್ ಬ್ಯಾಗಿಗೆ ಹಣ ಹಾಕುವ ಸಂದರ್ಭದಲ್ಲಿ ಸ್ವಲ್ಪ ಧೈರ್ಯ ತಂದುಕೊಂಡ ಸೆಕ್ಯುರಿಟಿ ಗಾರ್ಡ್, ಆತನ ಬಳಿ ಸಾಗಿದ್ದಾನೆ. ಮನು ಹಿಡಿದಿರುವುದು ನಕಲಿ ಗನ್ ಎಂದು ಅನ್ನಿಸಿದ ಕೂಡಲೇ ಅವನ ಮೇಲೆರಗಿ ನಾಲ್ಕು ತದಕಿದ್ದಾನೆ. ಇದರಿಂದ ಉತ್ತೇಜಿತರಾದ ಇತರೆ ಸಿಬ್ಬಂದಿ ಮನುವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜ್ಞಾನ ಭಾರತಿ ಠಾಣೆ ಪೊಲೀಸರು ಆತನಿಂದ ಒಟ್ಟು 10 ಲಕ್ಷ ರು ವಶಪಡಿಸಿಕೊಂಡು ಬ್ಯಾಂಕಿಗೆ ಹಿಂತಿರುಗಿಸಿದ್ದಾರೆ.
ನಂತರ ಮಳಿಗೆಯ ಶಟರ್ ಅನ್ನು ಏಕಾಏಕಿ ಮುಚ್ಚಿ ದರೋಡೆಗೆ ಯತ್ನಿಸಿದ. ಸೆಕ್ಯುರಿಟಿ ಗಾರ್ಡ್ ವಿಶ್ವನಾಥ್‌ನ ಸಹಾಯದಿಂದ ಸಿಬ್ಬಂದಿ ಹಾಗೂ ಮಾಲೀಕ ಸ್ವಾಮಿ ಆತನನ್ನು ಹಿಡಿದು ನಂತರ ಠಾಣೆಗೆ ಕರೆ ಮಾಡಿದರು. ಎಂದು ಪೊಲೀಸರು ತಿಳಿಸಿದ್ದಾರೆ. [ಚಿನ್ನ]












Click it and Unblock the Notifications