ಡೆಲ್ ಉದ್ಯೋಗಿ ಪಾಯಲ್ ಸ್ನೇಹಿತನೇ ಕೊಲೆಗಾರ

Dell employee murder case
ಬೆಂಗಳೂರು, ಡಿ.23:ಡೆಲ್ ಬಿಪಿಒ ಉದ್ಯೋಗಿ, ಜೆಪಿನಗರ ಏಳನೇ ಹಂತದ ನಿವಾಸಿ ಸುರೇಖಾ(29) ಅವರನ್ನು ಅಮಾನುಷವಾಗಿ ಕೊಂದ ಪಾತಕಿಯನ್ನು ಒಡಿಶಾದ ಕಟಕ್ ನಲ್ಲಿ ಬಂಧಿಸಲಾಗಿದೆ. ಪೊಲೀಸ್ ಭಾಷೆಯಲ್ಲಿ ಹೇಳುವುದಾದರೆ accuse no.2 ಈ ಕೊಲೆಯನ್ನು ಮಾಡಿದ್ದಾನೆ. ಪಾಯಲ್ ಹಾಗೂ ಮಿಶ್ರಾ ದಂಪತಿಗಳ ಸ್ನೇಹಿತ ಜೇಮ್ಸ್ ಜಾಯ್ ಅಲಿಯಾಸ್ ವಿನ್ಸೆಂಟ್ (25) ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಲೆಮರೆಸಿಕೊಂಡಿದ್ದ ಜೇಮ್ಸ್ ಜಾಯ್‌ನ ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾ ಮೂಲದ ಜೇಮ್ಸ್ ಜಾಯ್, ಸುರೇಖಾರ ಬಾಲ್ಯ ಸ್ನೇಹಿತ. ಅವರಿಬ್ಬರೂ 10ನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದಿದ್ದರು. ಅಲ್ಲದೇ ಆತ ಸುರೇಖಾರ ಪತಿ ನಾರಾಯಣ್ ಮಿಶ್ರಾಗೂ ಸ್ನೇಹಿತನಾಗಿದ್ದ. ಕೆಲ ತಿಂಗಳುಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಆತ ಮಿಶ್ರಾ ಅವರ ಮನೆಗೂ ಹಲವು ಬಾರಿ ಬಂದು ಹೋಗಿದ್ದ. ಅವರ ಕುಟುಂಬದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಆತ ಸುರೇಖಾರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಪೂರ್ವಯೋಜಿತ ಸಂಚಿನಂತೆ ಆತ, ಮಿಶ್ರಾ ಅವರು ಒಡಿಶಾಗೆ ಹೋಗಿದ್ದ ಸಂದರ್ಭವನ್ನು ನೋಡಿಕೊಂಡು ಅವರ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಜೆಪಿ ನಗರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಅತ್ಯಾಚಾರದ ಉದ್ದೇಶ?: ಪಾಯಲ್ ಅವರ ಮೇಲೆ ಅತ್ಯಾಚಾರ ಎಸಗುವ ಉದ್ದೇಶವನ್ನು ಆರೋಪಿ ಹೊಂದಿದ್ದ. ಆದರೆ ಅತ್ಯಾಚಾರ ಎಸಗಿಲ್ಲ. ಘಟನಾ ಸ್ಥಳವನ್ನು ನೋಡಿದಾಗ ಈ ಅಂಶ ಮನದಟ್ಟಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಇದು ಖಚಿತವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆ.ಪಿ.ನಗರ ಏಳನೇ ಹಂತದ ಲಕ್ಷ್ಮಿ ಲೇಔಟ್‌ನ ರಮಣಬಾಹು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಸುರೇಖಾ ಅವರನ್ನು ಡಿ.17ರಂದು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಲ್ಲದೇ ಅವರ ಎಡ ಸ್ತನದ ಸುತ್ತಮುತ್ತ ಹನ್ನೊಂದು ಬಾರಿ ಹಾಗೂ ಗುಪ್ತಾಂಗದ ಸುತ್ತಮುತ್ತ ನಾಲ್ಕು ಬಾರಿ ಚಾಕುವಿನಿಂದ ಇರಿಯಲಾಗಿತ್ತು. ಈ ಕೇಸ್ ನಲ್ಲಿ ಮೊದಲು ಪಾಯಲ್ ಅವರ ಪತಿ ಮಿಶ್ರಾ ಅವರ ಮೇಲೆ ಸಂಶಯ ವ್ಯಕ್ತವಾಗಿತ್ತು. ಸುಪಾರಿ ಕೊಲೆ ಇರಬಹುದು ಎಂದು ಪೊಲೀಸರು ಮೊದಲಿಗೆ ಶಂಕಿಸಿದ್ದರು.[ಕ್ರೈಂ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+