ಬೆಲೆ ಏರಿಕೆ ವಿರುದ್ಧ ಗೌಡರ ಪ್ರತಿಭಟನೆ
ಬೆಂಗಳೂರು,
ಡಿ. 23 : ಈರುಳ್ಳಿ ದರ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರಾಜ್ಯ ಸರಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಖಂಡಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು. id="toptextpromo">ಕೇಂದ್ರದಲ್ಲಿರುವ
ಯುಪಿಎ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿವಾಣ ಹಾಕಲು ವಿಫಲವಾಗಿದೆ. ತರಕಾರಿಗಳ ಬೆಲೆಗಳು ನೂರರ ಗಡಿ ದಾಟಿದರೆ ಶ್ರೀಸಾಮಾನ್ಯ ಬದುಕುವುದಾದರೂ ಹೇಗೆ ? ಕೇಂದ್ರ ಕೆಟ್ಟ ಆರ್ಥಿಕ ನೀತಿ ಹಾಗೂ ದುರುದೃಷ್ಟಿ ಕೊರತೆಯಿಂದಾಗಿ ಇಂದು ಜನರು ಪರಿತಪಿಸುವಂತಾಗಿದೆ. ಈರುಳ್ಳಿ ಬೆಲೆ ಕೆಜಿ 80 ಅಂದರೆ, ಬಡವರು ಜೀವನ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದೆ ದೇವೇಗೌಡರು. ಕೇಂದ್ರ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗುಡುಗಿದರು. id='are-slot-1' class='oiad oi-axt oiadv'> id='top-searched-articles'>ರಾಜ್ಯದಲ್ಲಿರುವ
ಬಿಜೆಪಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ಸೇರಿ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಇಂತಹ ಜನವಿರೋಧಿ ಸರಕಾರ ತಕ್ಕ ಪಾಠ ಕಲಿಸಲು ಸೂಕ್ತ ಸಮಯ ಬಂದೊದಗಿದೆ. ಜಿಪಂ ತಾಪಂ ಚುನಾವಣೆಗೆ ಮತ ಕೇಳಲು ಬರುವ ಬಿಜೆಪಿ ನಾಯಕರಿಗೆ ಪಾಠ ಕಲಿಸಿರಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.











Click it and Unblock the Notifications