ಅರುಂಧತಿಯನ್ನು ಬೆಂಬಲಿಸಿದ ಯುಆರ್ ಅನಂತಮೂರ್ತಿ

79 ವಸಂತಗಳನ್ನು ಪೂರೈಸಿ 80ನೇ ವರ್ಷಕ್ಕೆ ಕಾಲಿಟ್ಟಿರುವ ಅನಂತಮೂರ್ತಿ ಅವರನ್ನು ಸನ್ಮಾನಿಸಿ, 'ಅನಂತಮೂರ್ತಿ ಮಾತುಕತೆ : ಹತ್ತು ಸಮಸ್ತರ ಜೊತೆ' ಕೃತಿಯನ್ನು ಮಂಗಳವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಅರುಂಧತಿ ರಾಯ್ ಗೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ.
ಅರುಂಧತಿ ಅವರು ಮಾನವೀಯತೆಯ ಆಧಾರದ ಮೇಲೆ ಕಾಶ್ಮೀರದ ಜನರ ಹಕ್ಕಿನ ಕುರಿತು ಮಾತನಾಡಿದರೆ ಅವರನ್ನು ಭಾರತ ವಿರೋಧಿ ಎಂದು ಪಟ್ಟಕಟ್ಟುವುದು ಎಷ್ಟು ಸಮಂಜಸ ಎಂದು ಅನಂತಮೂರ್ತಿ ವಿಷಾದ ವ್ಯಕ್ತಪಡಿಸಿದರು. ಕಾಶ್ಮೀರಿ ಜನರಿಗಾಗಿ ದನಿ ಎತ್ತಿದ್ದಕ್ಕಾಗಿ ಅವರನ್ನು ದೇಶದ್ರೋಹಿ ಎಂದು ಕರೆಯುವುದು ನಾನು ಒಪ್ಪಲಾರೆ ಎಂದು ಅವರು ನುಡಿದರು.
ಅರುಂಧತಿ ಅವರ ವಿಷಯದಲ್ಲಿ ಎತ್ತಲಾಗಿರುವ ರಾಷ್ಟ್ರೀಯತೆಯ ಕಲ್ಪನೆ ನಿಜಕ್ಕೂ ಅಪಾಯಕಾರಿ. ಮೂಲಭೂತವಾದಿಗಳ ರಾಷ್ಟ್ರೀಯತೆಗೂ ದೇಶಪ್ರೇಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಮಗೆ ಈ ಸಂದರ್ಭದಲ್ಲಿ ಬೇಕಿರುವುದು ರಾಷ್ಟ್ರೀಯತೆಗಿಂತ ಹೆಚ್ಚಾಗಿ ಗಾಂಧೀಜಿ ಮತ್ತು ಟಾಗೋರ್ ಪ್ರತಿಪಾದಿಸಿರುವ ನಾಗರಿಕತೆ. ರಾಷ್ಟ್ರೀಯತೆ ಎನ್ನುವುದು ಹಿಂದೂತ್ವದ ಮೇಲೆ ಆಧಾರಿತವಾಗಿದೆ. ನಮಗೆ ಬೇಕಿರುವುದು ನಾಗರಿಕತೆ ಮತ್ತು ಮಾನವೀಯತೆ ಎಂದು ಅವರು ವಿಶ್ಲೇಷಿಸಿದರು. [ಜಿಲ್ಲಾಸುದ್ದಿ]












Click it and Unblock the Notifications