ಪ್ರೆಸ್ ಎಂಬ ಸ್ಟಿಕ್ಕರ್ ಇದ್ರೆ ಮೊದಲು ಚೆಕ್ ಮಾಡಿ

ವಾಹಿದ್ ಉರ್ ರೆಹಮಾನ್ ಎಂಬವನು ತುಮಕೂರಿನಲ್ಲಿ ಆಪ್ಟಿಷನ್ ವೃತ್ತಿಯಲ್ಲಿದ್ದ. ವರದಿಗಾರ ಎಂದು ವಾಹನಗಳಲ್ಲಿ ತಿರುಗುತ್ತಿದ್ದ ಈತನನ್ನು ತಡೆದು ವಿಚಾರಿಸಿದಾಗ ಸುಅಮರು 30ಕ್ಕೂ ಅಧಿಕ ವಾಹನಗಳ ಕಳ್ಳತನ ಪ್ರಕರಣ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಪ್ರೆಸ್ ಹೆಸರಿನಲ್ಲಿ ದುರುಪಯೋಗ ತಡೆಯುವ ಉದ್ದೇಶದಿಂದ ಹೀಗೆ ನಿರ್ಧರಿಸಲಾಗಿದೆ. ಸರಿಯಾದ ದಾಖಲೆ ತೋರಿಸಿದರೆ ಬಿಟ್ಟು ಕಳುಹಿಸಲಾಗುತ್ತದೆ ಎಂದು ಬಿದರಿ ತಿಳಿಸಿದರು.
ದ್ವಿಚಕ್ರ ವಾಹನಗಳನ್ನು ಕದ್ದು ಅದಕ್ಕೆ "ಪ್ರೆಸ್" ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದ. ಹಾಗೂ ಮಾರಾಟ ಮಾಡುತ್ತಿದ್ದ. ಈತನಿಂದ ಮೂವತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತಿನಗರ, ಕಮರ್ಷಿಯಲ್ ಸ್ಟ್ರೀಟ್, ಹೈ ಗ್ರೌಂಡ್ಸ್, ಜೆಸಿ ನಗರ, ವಿಲ್ಸನ್ ಗಾರ್ಡನ್, ಮೈಸೂರು ರಸ್ತೆ ಹಾಗೂ ವಿಜಯನಗರ ಈತನ ಕಾರ್ಯಕ್ಷೇತ್ರವಾಗಿತ್ತು. ಕದ್ದ ಮಾಲನ್ನು ತುಮಕೂರಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದ ಎಂದು ಬಿದರಿ ವಿವರಿಸಿದರು.
ಪೊಲೀಸ್ ಬಲೆಗೆ ಬಿದ್ದ ಮೂರ್ಖ: ರೆಹಮಾನ್ ಬೈಕ್ ಯೊಂದನ್ನು ಕದ್ದು ಗೆಳೆಯ ಅಜ್ಮತ್ ಗೆ 20 ಸಾವಿರಕ್ಕೆ ಮಾರಿದ್ದಾನೆ. ಅಜ್ಮತ್ ಪೊಲೀಸರ ಕೈಗೆ ಸಿಕ್ಕಿಬಿದ್ದು ನೋಂದಣಿ ಸಂಖ್ಯೆ, ವಾಹನ ಸಂಖ್ಯೆ ಪರೀಕ್ಷಿಸಿದಾಗ ಎರಡರಲ್ಲೂ ವ್ಯತ್ಯಾಸ ಕಂಡು ಬಂದಿದೆ. ಇದೇ ಸಮಯಕ್ಕೆ ಪುಲಿಕೇಶಿ ನಗರದ ಎಸಿಪಿ ಬಿ ಅಶೋಕ್ ಕುಮಾರ್ ಅವರ ಬಳಿಗೆ ಹೋಗಿದ್ದ ರೆಹಮಾನ್(ophthalmologist), ಪೊಲೀಸರ ಕಣ್ಣು ಪರೀಕ್ಷೆ ಶಿಬಿರ ಏರ್ಪಡಿಸಲು ಅನುಮತಿ ಕೋರಿದ್ದಾನೆ. ಹಾಗೆ ತನ್ನ ಗೆಳೆಯನನ್ನು ಭಾರತಿ ನಗರ ಪೊಲೀಸರು ಹಿಡಿದಿದ್ದಾರೆ ಏನಾದರೂ ಮಾಡಿ ಎಂದು ಕೋರಿದ್ದಾರೆ.
ಭಾರತಿ ನಗರ ಠಾಣೆಯನ್ನು ಸಂಪರ್ಕಿಸಿದ ಅಶೋಕ್ ಕುಮಾರ್, ಅಜ್ಮತ್ ವಾಹನ ಸಂಖ್ಯೆ ಹಾಗೂ ರೆಹಮಾನ್ ವಾಹನ ಸಂಖ್ಯೆ ತಾಳೆ ಹಾಕಿ ನೋಡಿ ಕಳ್ಳರ ನಿಜವೇಷವನ್ನು ಬಯಲು ಮಾಡಿ, ಬಂಧಿಸಿ ಹಳೆ ಪುರಾಣವನ್ನು ರೆಹಮಾನ್ ಬಾಯಿಂದ ಹೊರಡಿಸಿದ್ದಾರೆ. [ಕ್ರೈಂ]












Click it and Unblock the Notifications