ವೀರಾಜಪೇಟೆಯಲ್ಲಿ ಚಿರತೆ ಚರ್ಮ ವಶ

ಆದರೆ ಈ ದಂಧೆಯ ಪ್ರಮುಖ ಆರೋಪಿ ನಾಪತ್ತೆಯಾಗಿರುವುದು ಜಾಲದ ಹಿಂದಿನ ರಹಸ್ಯ ಚಟುವಟಿಕೆಯನ್ನು ಭೇದಿಸಲು ತೊಂದರೆಯಾಗಿದೆ. ಇದೀಗ ಚಿರತೆ ಚರ್ಮ ಸಹಿತ ಸಿಕ್ಕಿಬಿದ್ದವರು ವೀರಾಜಪೇಟೆಯ ನಿವಾಸಿಗಳಾದ ಖಾಲಿದ್, ಮಾಯೀಂ, ಹಸನ್, ಸುಬೇರ್ ಎಂಬುವರಾಗಿದ್ದು, ಇವರು ವೀರಾಜಪೇಟೆಯಲ್ಲಿ ಚಿರತೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಈ ಕುರಿತು ಆನೆಚೌಕೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ರವೀಂದ್ರಕುಮಾರ್‌ರವರಿಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ಚರ್ಮ ಖರೀದಿಸುವ ವ್ಯಾಪಾರಿಗಳ ಸೋಗಿನಲ್ಲಿ ಸಿಬ್ಬಂದಿಗಳೊಂದಿಗೆ ತೆರಳಿ ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭ ಆಲಿ ಎಂಬಾತ ತಲೆ ಮರೆಸಿಕೊಂಡಿದ್ದು, ಆತನೇ ಈ ದಂಧೆಯ ಪ್ರಮುಖನೆಂದು ಹೇಳಲಾಗಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ನಮಗೆ ಆಲಿ ಎಂಬಾತ ಚರ್ಮವನ್ನು ನೀಡಿದ್ದಾಗಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದೀಗ ತಲೆಮರೆಸಿಕೊಂಡಿರುವ ಆರೋಪಿ ಆಲಿ ಪತ್ತೆಗೆ ಕ್ರಮಕೈಗೊಂಡಿದ್ದು, ಆತ ಸೆರೆಸಿಕ್ಕಿದ್ದೇ ಆದಲ್ಲಿ ದಂಧೆಯ ಹಿಂದಿನ ರಹಸ್ಯ ಬಯಲಾಗುವ ಸಾಧ್ಯತೆಯಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications