ಕಾಂಗ್ರೆಸ್ಸನ್ನು ಭೂತದಂತೆ ಬೆಂಬತ್ತಿರುವ ವಿಕಿಲೀಕ್ಸ್

ಮುಸ್ಲಿಂ ಭಯೋತ್ಪಾದಕರಿಗಿಂತ ಹಿಂದೂ ಉಗ್ರವಾದಿಗಳೇ ಅಪಾಯಕಾರಿ ಎಂದಿದ್ದ ರಾಹುಲ್ ಗಾಂಧಿ ಈಗ ಆ ಹೇಳಿಕೆಯನ್ನೂ ಸಮರ್ಥಿಸಿಕೊಂಡು ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ. ರಾಹುಲ್ ಅಪ್ರಬುದ್ಧ, ತಿಳಿಗೇಡಿ ಎಂಬೆಲ್ಲ ವಿಶೇಷಣಗಳ ಬಾಣವನ್ನು ಹಿಂದೂ ನಾಯಕರು ರಾಹುಲ್ ಮೇಲೆ ಬಿಡುತ್ತಿದ್ದಾರೆ. ದೇಶದಲ್ಲಿ ಬೆರಳೆಣಿಕೆಯಷ್ಟು ಹಿಂದೂ ಉಗ್ರವಾದಿಗಳು ಇರಬಹುದು. ಆದರೆ, ಅವರನ್ನು ಲಷ್ಕರ್-ಇ-ತೊಯ್ಬಾಗೆ ಹೋಲಿಸುತ್ತಿರುವುದು ನಾಚಿಕೆಗೇಡು ಎಂದು ಶಿವಸೇನೆ ಕೆಂಡಕಾರಿದೆ. [ಓದಿರಿ : ಹಿಂದೂ ಉಗ್ರವಾದ ಹೇಳಿಕೆಗೆ ರಾಹುಲ್ ಸಮರ್ಥನೆ]
ರಾಹುಲ್ ನಂತರ ಸೋನಿಯಾ ಗಾಂಧಿ ಮತ್ತು ಪಿ. ಚಿದಂಬರಂ ಅವರ ಕುರಿತಂತೆಯೂ ವಿಕಿಸೋರಿಕೆಗಳು ಹೊರಬೀಳುತ್ತಿರುವುದು ಕಾಂಗ್ರೆಸ್ಸಿಗೆ ಭಾರೀ ತಲೆನೋವು ತಂದಿದೆ. ಭಾರತ ಮತ್ತು ಅಮೆರಿಕಾ ನಡುವಿನ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳನ್ನು ನಿಯಂತ್ರಿಸುವಲ್ಲಿ ಸೋನಿಯಾ ಸಂಪೂರ್ಣ ವಿಫಲರಾಗಿದ್ದರು ಎಂದು ಅಮೆರಿಕಾದ ದೂತಾವಾಸ ಸೋನಿಯಾರನ್ನು ತರಾಟೆಗೆ ತೆಗೆದುಕೊಂಡಿತ್ತು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ.
ದಕ್ಕಿದ ಅವಕಾಶಗಳನ್ನು ತಪ್ಪಿಸಿಕೊಳ್ಳುವುದರಲ್ಲಿ ಸೋನಿಯಾ ಸಿದ್ಧಹಸ್ತರು ಎಂದು ಲೇವಡಿ ಅಮೆರಿಕಾ ದೂತಾವಾಸ ಲೇವಡಿ ಮಾಡಿದ್ದನ್ನು ಪ್ರಸ್ತಾಪಿಸಿರುವ ವಿಕಿಲೀಕ್ಸ್, ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೇ ಅನುಕೂಲವಾಗುತ್ತದೆಂದು ತಿಳಿದಿದ್ದರೂ ಬಲಿಷ್ಠ ನಾಯಕತ್ವ ತೋರುವಲ್ಲಿ ಸೋನಿಯಾ ಸೋತಿದ್ದಾರೆ ಎಂದು ಪ್ರಸ್ತುತ ಜಕಾರ್ತಾದಲ್ಲಿರುವ ಅಮೆರಿಕಾದ ರಾಜಕಾರಣಿ ಟೆಡ್ ಓಸಿಯಸ್ ಹೇಳಿದ್ದಾರೆ ವೆಬ್ ಸೈಟ್ ಪ್ರಸ್ತಾಪಿಸಿದೆ.
ಪಿ. ಚಿದಂಬರಂ ಅವರನ್ನೂ ಬಿಡದ ವಿಕಿಲೀಕ್ಸ್, 2008ರ ನವೆಂಬರ್ 26ರಂದು ಆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಡೆವಿಡ್ ಕೋಲ್ಮನ್ ಹೆಡ್ಲಿಗೆ ಸಂಬಂಧಿಸಿದಂತೆ ಅಮೆರಿಕಾದೊಂದಿಗೆ ನೇರವಾಗಿ ಮಾಹಿತಿಗಳನ್ನು ಕೇಳಿದ್ದರು. ಆ ದಾಳಿಯಲ್ಲಿ ಹೆಡ್ಲಿ ಒಬ್ಬರೇ ಭಾಗಿಯಾಗಿರಲಿಕ್ಕಿಲ್ಲ ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದ್ದರೆಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ. ಅಮೆರಿಕಾದ ತನಿಖೆಯ ಬಗ್ಗೆ ಭಾರತ ಸರಕಾರ ತೃಪ್ತಿ ವ್ಯಕ್ತಪಡಿಸಿದ್ದರೂ ಚಿದಂಬರಂ ಈ ಮಾಹಿತಿಯನ್ನು ಕೇಳಿದ್ದರು ಎಂದು ತನ್ನ ಭ್ರಷ್ಟಾಚಾರ ಬಯಲುಮಾಡುವ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿದೆ.












Click it and Unblock the Notifications