ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಟಿಟಿಇ ಹಿಟ್ ಲಿಸ್ಟ್ ನಲ್ಲಿ ಪಿಎಂ, ಚಿದು!

By Mrutyunjaya Kalmat
|
Google Oneindia Kannada News

LTTE logo
ನವದೆಹಲಿ, ಡಿ. 16 : ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಎಲ್ ಟಿಟಿಇ ಉಗ್ರ ಪಡೆ ಇದೀಗ ಭಾರತದ ಹಿರಿಯ ರಾಜಕಾರಣಿಗಳ ಮೇಲೆ ಕಣ್ಣಿಟ್ಟಿದೆ. ಮುಖ್ಯವಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಗೃಹ ಸಚಿವ ಪಿ ಚಿದಂಬರಂ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಮೇಲೆ ಟಾರ್ಗೆಟ್ ಮಾಡಿಕೊಂಡು ಕಾರ್ಯಾಚರಣೆ ಆರಂಭಿಸಿದೆ ಎಂದು ಇಂಟೆಲಿಜೆನ್ಸಿ ಇಲಾಖೆ ತಿಳಿಸಿದೆ.

ಇದೇ ವರ್ಷ ಆರಂಭದಲ್ಲಿ ಶ್ರೀಲಂಕಾ ಸೇನಾಪಡೆ ಆರಂಭಿಸಿದ ಅಪರೇಷನ್ ಎಲ್ ಟಿಟಿಇಯಲ್ಲಿ ಎಲ್ಲ ಉಗ್ರರು ಸಾವನ್ನಪ್ಪಿದ್ದಾರೆ. ಎಲ್ ಟಿಟಿಇ ಕಥೆ ಮುಗಿಯಿತು ಎನ್ನುಕೊಳ್ಳುತ್ತಿರುವಾಗಲೇ ಮತ್ತೆ ಉಗ್ರ ಪಡೆ ಮತ್ತೆ ಒಟ್ಟಾಗಿದ್ದು, ಅದು ಭಾರತದಲ್ಲಿ ಬೀಡುಬಿಟ್ಟಿರುವುದಾಗಿ ಇಂಟೆಲಿಜೆನ್ಸಿ ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ ನೆಲೆಸಿರುವ ಎಲ್ ಟಿಟಿಇ ಉಗ್ರರು, ರಾಜಕೀಯ ಮುಖಂಡರು ತಮಿಳುನಾಡಿಗೆ ಭೇಟಿ ನೀಡಿದಾಗ ಅವರ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ.

ಎಲ್ ಟಿಟಿಇ ಕಡಿವಾಣಕ್ಕೆ ಭಾರತದ ಸೇನೆಯನ್ನು ಕಳುಹಿಸಿದ ಎಂಬ ಕಾರಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಉಗ್ರರು 1991ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಮಾನವ ಬಾಂಬ್ ಮೂಲಕ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಮುಂದಿನ ತಿಂಗಳು ಪ್ರಧಾನಿ ಮನಮೋಹನ್ ಸಿಂಗ್ ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗಾಗಿ ಭಾರಿ ಕಟ್ಟೆಚ್ಚರ ವಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

English summary
Indian Prime Minister seem to be a "wanted" man these days. This time around, there"s a big difference, the "wanted" tag is serious. Prime Minister Manmohan Singh , Home Minister P Chidambaram and TamilNadu Chief Minister are apparently on the LTTE hit list, according to Intelligence reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X