ಡಿ.19ರಂದು ಗೋವಾ ಸುವರ್ಣ ಮುಕ್ತಿ ದಿನಾಚರಣೆ

ಆ ದಿನ ಸಾಯಂಕಾಲ 4 ಗಂಟೆಗೆ ಪಣಜಿಯ ಗೋವಾ ರಾಜ್ಯ ವಸ್ತು ಸಂಗ್ರಹಾಲಯದ ಸಭಾಭವನದಲ್ಲಿ ನೇತ್ರದಾನ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪಣಜಿಯ ಹಿರಿಯ ಸಮಾಜ ಸೇವಕ ಗೌರೀಶ್ ಧೋಂಡ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹಿರಿಯ ಗೋವಾ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗೋವಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ನಾಗೇಶ ಕರ್ಮಲಿ ಹಾಗೂ ಪೊಂಡಾದ ಸ್ವಾತಂತ್ರ್ಯ ಹೋರಾಟಗಾರ ಕನ್ನಡಿಗ ಶ್ರೀನಿವಾಸ ಯರ್ನಾಡ್ ಅವರು ಗೌರವಾತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಿತಾರವಾದನ, ಭರತನಾಟ್ಯ, ಸುಗಮಸಂಗೀತಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಗೋವಾದ ಮುಕ್ತಿಯಾಗಿ 50 ವರ್ಷಗಳು ಸಂದ ಪ್ರಯುಕ್ತ 50 ಜನರಿಂದ ನೇತ್ರದಾನ ಮಾಡಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನೇತ್ರದಾನ ಮಾಡಲಿಚ್ಛಿಸುವವರು ಗೋವಾ ಕನ್ನಡ ಸಮಾಜದ ಅಧ್ಯಕ್ಷ ವಿಜಯಶೆಟ್ಟಿ, ಕಾರ್ಯದರ್ಶಿ ಪ್ರಹ್ಲಾದ ಗುಡಿ ಅಥವಾ ಗೋವಾ ಕೇಸರಿಯ ಸಂಪಾದಕ ಶ್ರೀನಿವಾಸ ಪೈ ಅವರನ್ನು ಸಂಪರ್ಕಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ. ಸುವರ್ಣ ಸಂದರ್ಭದಲ್ಲಿರುವ ಗೋವಾ ಮುಕ್ತಿಗಾಗಿ ನಡೆದ ಹೋರಾಟದ ಒಂದು ವಿಡಿಯೋ ಝಲಕ್ ನೋಡಿ.












Click it and Unblock the Notifications