ತುಮಕೂರಿನಲ್ಲಿ ಸೋಮಣ್ಣ ಮ್ಯಾಜಿಕ್
ಬೆಂಗಳೂರು,
ಡಿ. 11 : ಹಗರಣಗಳಿಂದ ತತ್ತರಿಸಿ ಹೋಗಿರುವ ಬಿಜೆಪ ಕಡೆಗೆ ಅನ್ಯ ಪಕ್ಷಗಳಿಂದ ಬಿಜೆಪಿ ವಲಸೆ ಬರುತ್ತಿರುವವರ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ತುಮಕೂರಿಗೆ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ವಿ ಸೋಮಣ್ಣ ಸ್ವಕ್ಷೇತ್ರ ವಿಜಯನಗರದಲ್ಲಿ ತೋರಿಸಿರುವ ಮ್ಯಾಜಿಕ್ ನ್ನು ತುಮಕೂರು ಜಿಲ್ಲೆಯಲ್ಲೂ ಆರಂಭಿಸಿದ್ದಾರೆ. id="toptextpromo">ಸೋಮಣ್ಣ
ಹಾಗೂ ಪಾವಗಡ ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೋಮ್ಲಾ ನಾಯಕ್ ನೇತೃತ್ವದಲ್ಲಿ ಪಾವಗಡದ ಮುನಿಸಿಪಲ್ ಅಧ್ಯಕ್ಷ ಗುರಪ್ಪ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರು ವೆಂಕಟರಾಮಯ್ಯ, ಕೌನ್ಸಿಲರ್ ಗಳಾದ ಮಾ.ನಂ. ವೆಂಕಟಸ್ವಾಮಿ, ಸೊಗಡು ವೆಂಕಟೇಶ್, ಆಂಜನಪ್ಪ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸೋಮಣ್ಣ
ಅವರು ತುಮಕೂರು ಜಿಲ್ಲೆಯಲ್ಲಿ ಚಿಕ್ಕ ಮಟ್ಟದ ಆಪರೇಷನ್ ಕಮಲ ನಡೆಸಿದ್ದು, ಪಾವಗಡದ ತಾಲ್ಲೂಕು ಮಟ್ಟದ ಜೆಡಿಎಸ್, ಕಾಂಗ್ರೆಸ್ ಮುಖಂಡರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ತುಮಕೂರು ಮತ್ತು ಹಾಸನ ಜಿಲ್ಲಾ ಉಸ್ತುವಾರಿಯಾಗಿರುವ ಸೋಮಣ್ಣ, ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿಯೂ ಅವರ ಮೇಲಿದೆ.











Click it and Unblock the Notifications