ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಡಿಎಫ್ ಸಿಯಿಂದ ಅಂಧರಿಗಾಗಿ ವಿಶೇಷ ಎಟಿಎಂ

By Mahesh
|
Google Oneindia Kannada News

HDFC Diebold ATMs
ಬೆಂಗಳೂರು, ಡಿ.9: ಅಂಧರಿಗಾಗಿ ವಿಶೇಷ ಎಟಿಎಂಗಳನ್ನು ವಿನ್ಯಾಸಗೊಳಿಸಿದೆ. ಯಾರ ಸಹಾಯವಿಲ್ಲದೆ ಅಂಧರು ಹಣವನ್ನು ಪಡೆಯಬಹುದಾದ ವ್ಯವಸ್ಥೆಯನ್ನು ದೇಶದೆಲ್ಲೆಡೆ ಶೀಘ್ರದಲ್ಲೇ ವಿಸ್ತರಿಸಲಾಗುವುದು ಎಂದು ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ ಪ್ರಕಟಿಸಿದೆ. ಬ್ರೈಲ್ ಲಿಪಿ ಸಹಾಯದಿಂದ ಎಟಿಎಂ ಯಂತ್ರ ಬಳಕೆಗೆ ಅನುಕೂಲ ಕಲ್ಪಿಸಲಾಗಿದೆ.

ಮೊದಲ ಹಂತದಲ್ಲಿ ಈ ಡೈಬೋಲ್ಡ್ (D450) ಎಟಿಎಂಗಳನ್ನು ಅಳವಡಿಸಲಾಗುವುದು. ಇದು ಸದ್ಯಕ್ಕೆ ಚಾಲ್ತಿಯಲ್ಲಿರುವ ಎಟಿಎಂಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತದೆ. ಗ್ರಾಹಕ ಸ್ನೇಹಿ ವಿನ್ಯಾಸದ ಹೊಂದಿರುವುದರಿಂದ ವಿಕಲ ಚೇತನರು ಕೂಡಾ ಸುಲಭವಾಗಿ ಬ್ಯಾಂಕ್ ನೊಡನೆ ವ್ಯವಹರಿಸಬಹುದಾಗಿದೆ ಎಂದು ಎಚ್ ಡಿಎಫ್ ಸಿ ಬ್ಯಾಂಕ್ ನ ಕಾರ್ಯಕಾರಿ ಉಪಾಧ್ಯಕ್ಷ ಸಂಜೀವ್ ಪಾಟೀಲ್ ಹೇಳಿದರು.

15 ಇಂಚಿನ LCD ದರ್ಶಕದ ಜೊತೆಗೆ ಬ್ರೈಲ್ ಲಿಪಿ ಬಳಸಲು ಕೀ ಪ್ಯಾಡ್ ಇರುತ್ತದೆ. ಹೆಡ್ ಫೋನ್ ಜಾಕ್ ಹಾಗೂ ಸ್ಪೀಕರ್ ಗಳನ್ನು ಅಳವಡಿಸಲಾಗಿದ್ದು, ಧ್ವನಿ ಸಹಾಯ ಪಡೆದು ವ್ಯವಹರಿಸಬಹುದಾಗಿದೆ. ಡಿಜಿಟಲ್ ವಿಡಿಯೋ ಮುದ್ರಣ(DVRs) ಹಾಗೂ ಸ್ಕಿಮಿಂಗ್ ತಂತ್ರಜ್ಞಾನ (ASD)ಗಳನ್ನು ಈ ಯಂತ್ರಗಳು ಹೊಂದಿದ್ದು, ಅತ್ಯಂತ ಸುರಕ್ಷಿತವಾಗಿರುತ್ತದೆ.

ಸುಮಾರು ಬ್ರೈಲ್ ಸುಧಾರಿತ 4,500 ಎಟಿಎಂಗಳನ್ನು ಅಳವಡಿಸಲು ಡೈಬೋಲ್ಡ್ ಜೊತೆ ಎಚ್ ಡಿಎಫ್ ಸಿ ಕೈ ಜೋಡಿಸಿದೆ. ಮಾಹಿತಿ ಮುದ್ರಣ, ಸಂಗ್ರಹಣೆ ಹಾಗೂ ಸ್ಥಳೀಯ ದರ್ಶಕ ಸೌಲಭ್ಯಗಳನ್ನು ಸುಮಾರು 700 ಎಚ್ ಡಿಎಫ್ ಸಿ ಬ್ರಾಂಚ್ ಗಳಲ್ಲಿ ಡೈಬೋಲ್ಡ್ ಅಳವಡಿಸಿದೆ.

English summary
Visually Challenged can now access ATM operations easily. India"s largest private sector bank HDFC Bank has upgraded its automated teller machines (ATMSs) with Braille-enabled machines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X