ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಗರಣಗಳ ಬಯಲಿಗೆ ಜನವರಿಯಲ್ಲಿ ಅಧಿವೇಶನ: ಸಿಎಂ

By Mahesh
|
Google Oneindia Kannada News

Yeddyurappa to call assembly session to expose Oppn parties
ಹೊಸನಗರ, ಡಿ.9: ಕಾಂಗ್ರೆಸ್-ಜೆಡಿಎಸ್ ಹಗರಣಗಳನ್ನು ಬಯಲು ಮಾಡುವುದಕ್ಕಾಗಿಯೇ ಜನವರಿಯಲ್ಲಿ ಒಂದು ತಿಂಗಳ ಕಾಲ ವಿಧಾನಮಂಡಲ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಜಿಲ್ಲಾ ಪಂಚಾಯತಿ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಚುನಾವಣೆ ಮುಗಿಯುತ್ತಿದ್ದಂತೆ ಅಧಿವೇಶನ ಕರೆಯಲಾಗುವುದು. ಅಲ್ಲಿ ದಾಖಲೆ ಸಮೇತ ಪ್ರತಿಪಕ್ಷಗಳ ಜಾತಕ ಬಿಚ್ಚುವೆ ಎಂದು ಎಚ್ಚರಿಕೆ ನೀಡಿದರು.

'ನನ್ನ ಮೇಲೆ ವಿನಾ ಕಾರಣ ಹೊರಿಸಿರುವ ಭೂ ಹಗರಣ ಆರೋಪವು ಸ್ಥಳೀಯ ಸಂಸ್ಥೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಎಲ್ಲಾ ಆರೋಪಗಳಿಗೆ ಮುಂಬರುವ ಚುನಾವಣೆ ಎಂಬ ಜನತಾ ನ್ಯಾಯಾಲಯದಲ್ಲಿ ಜಯ ದೊರೆಯಲಿದೆ. ಪ್ರತಿಪಕ್ಷಗಳು ಅಧಿವೇಶನದಲ್ಲಿ ಬೇಕಾದರೆ ಚರ್ಚೆ ನಡೆಸಲಿ. ಅದನ್ನು ಬಿಟ್ಟು ಬೀದಿಯಲ್ಲಿ ಚರ್ಚಿಸುವುದು ಸೂಕ್ತವಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯುತ್ ದರ ಏರಿಕೆ ಅನಿವಾರ್ಯ: ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಮಧ್ಯಮ ವರ್ಗದ ಜನರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಆದರೆ ಇದು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ ಎಂದು ಅವರು ತಿಳಿಸಿದರು.

ತಮ್ಮ ತವರು ಜಿಲ್ಲೆ ಶಿವಮೊಗ್ಗದ ಜಿಲ್ಲಾ ಪಂಚಾಯ್ತಿಯಲ್ಲಿ ಒಮ್ಮೆಯೂ ಬಿಜೆಪಿ ನಿಚ್ಚಳ ಬಹುಮತ ಗಳಿಸಿಲ್ಲ. ಈ ಬಾರಿ ಜನತೆ ಆಶೀರ್ವದಿಸಬೇಕು. ಅಭಿವೃದ್ಧಿ ಮಂತ್ರದ ಸಹಾಯದಿಂದ ಸ್ಥಳೀಯ ಚುನಾವಣೆ ಎಂಬ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.

English summary
Yeddyurappa to call a special karnataka assembly session in early 2011 to discuss about land scams. He said BJP now concentrating on Zilla and Taluk Panchayat Election. I will expose Congerss JDS scams in the session with document proof he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X