ಹಿರಿಯ ರಾಜಕಾರಣಿ ರಾಜಶೇಖರಮೂರ್ತಿ ನಿಧನ
ಬೆಂಗಳೂರು,
ಡಿ. 6 : ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಎಂ ರಾಜಶೇಖರ ಮೂರ್ತಿ ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಭಾನುವಾರ ರಾತ್ರಿ 11.30ರ ಹೊತ್ತಿಗೆ ತೀವ್ರ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ. id="toptextpromo">1922ರ
ಮೇ 10ರಂದು ಮೈಸೂರು ಜಿಲ್ಲೆಯ ಮಾಲಂಗಿಯಲ್ಲಿ ಜನಿಸಿದ್ದ ರಾಜಶೇಖರ ಮೂರ್ತಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಟಿ ನರಸೀಪುರದಿಂದ ಐದು ಬಾರಿ ಶಾಸಕರಾಗಿ, ರಾಜ್ಯದಲ್ಲಿ ಹಣಕಾಸು, ಅಬಕಾರಿ, ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಮೂರ್ತಿ, ಕೇಂದ್ರ ರಸ್ತೆ ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. id='are-slot-1' class='oiad oi-axt oiadv'> id='top-searched-articles'>1952ರಲ್ಲಿ
ಸಕ್ರಿಯ ರಾಜಕೀಯ ಪ್ರವೇಶಿಸಿದ್ದ ಮೂರ್ತಿ, 1952ರಿಂದ 1977ರವರೆಗೆ ಕಾಂಗ್ರೆಸ್, 1977ರಿಂದ 79ರವರೆಗೆ ಜನತಾಪಕ್ಷ, 1979ರಿಂದ 1999ರವರೆಗೆ ಕಾಂಗ್ರೆಸ್, 1999ರಿಂದ 2004ರವರೆಗೆ ಬಿಜೆಪಿ ಹಾಗೂ ನಂತರದ ಅವಧಿಯಲ್ಲಿ ಜೆಡಿಎಸ್ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪಾರ್ಥೀವ ಶರೀರವನ್ನು ಸೋಮವಾರ ಬೆಂಗಳೂರಿಗೆ ತರಲಾಗುತ್ತಿದ್ದು, ಮಂಗಳವಾರ ಅಂತ್ಯ ಸಂಸ್ಕಾರ ನಡೆಯಲಿದ.











Click it and Unblock the Notifications