ಪತ್ನಿ, ಮಗುವನ್ನು ಶಿವಗಂಗೆ ಬೆಟ್ಟದಿಂದ ನೂಕಿದ ಪತಿ?
ನೆಲಮಂಗಲ,
ಡಿ.5: ಪ್ರೀತಿಸಿ ಮದುವೆಯಾಗಿ ನಾಲ್ಕು ತಿಂಗಳಿಗೆ ಹೆಂಡತಿ ಹಾಗೂ ಮಗುವನ್ನು ಯುವ ಪತಿರಾಯ ಪರಲೋಕಕ್ಕೆ ಕಳಿಸಿದ್ದಾನೆ. ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಮೇಲಿಂದ ತನ್ನ ಪತ್ನಿ ಭಾಗ್ಯ ಹಾಗೂ ಮಗು ಶ್ರುತಿಯನ್ನು ಕೆಳಕ್ಕೆ ತಳ್ಳಿ ಅಮಾನುಷವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಆರೋಪಿ ಗಿರೀಶನನ್ನು ಬಂಧಿಸಿರುವ ಪೊಲೀಸರು ಮೃತಳ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. id="toptextpromo">ದೇವರ
ದರ್ಶನಕ್ಕೆ ಹೋಗೋಣ ಎಂದು ಪತ್ನಿಯನ್ನು ನಂಬಿಸಿದ ಆರೋಪಿ ಗಿರೀಶ್ ಪತ್ನಿಯನ್ನು ಶುಕ್ರವಾರ ಸಂಜೆ ಶಿವಗಂಗೆ ಬೆಟ್ಟಕ್ಕೆ ಕರೆ ತಂದು ಕೊಲೆಗೈದಿದ್ದಾನೆ. ಬಿಇ ವಿದ್ಯಾರ್ಥಿಯಾಗಿರುವ 21 ವರ್ಷದ ಗಿರೀಶ್ ಹೊನ್ನುಡಿಕೆ ಬಳಿಯ ಬೇಗೂರಿನ ನಿವಾಸಿ 19 ವರ್ಷದ ಭಾಗ್ಯಳನ್ನು ಪ್ರೀತಿಸಿ ಆಕೆಯನ್ನು ಮದುವೆಗೆ ಮೊದಲೇ ಗರ್ಭವತಿ ಮಾಡಿದ್ದ. ಈ ವಿಷಯ ತಿಳಿದ ಗ್ರಾಮಸ್ಥರು ಇಬ್ಬರ ಮದುವೆ ಮಾಡಿಸಿದ್ದರು. ಮದುವೆಯಾದ ತಿಂಗಳಲ್ಲೆ ಮಗು ಹುಟ್ಟಿತ್ತು. id='are-slot-1' class='oiad oi-axt oiadv'> id='top-searched-articles'>ಆದರೆ,
ಸದ್ಯ 3 ತಿಂಗಳು ತುಂಬಿದ ಮಗುವಿನ ಜನ್ಮ ರಹಸ್ಯ ಕುರಿತ ಗೊಂದಲ ಎರಡು ಕುಟುಂಬದ ನಡುವೆ ಜಗಳಕ್ಕೆ ಕಾರಣವಾಗಿತ್ತು. ಭಾಗ್ಯಳನ್ನು ಗಿರೀಶನೇ ಕೊಲೆ ಮಾಡಿದ್ದಾನೆ ಎಂದು ಆಕೆಯ ಅಣ್ಣ ಪೊಲೀಸರಿಗೆ ಹೇಳಿದ್ದಾನೆ. ನನಗೇನು ಗೊತ್ತಿಲ್ಲ ಆಕೆ ಆಯತಪ್ಪಿ ಕೆಳಗೆ ಬಿದ್ದಳು ಎಂದು ಆರೋಪಿ ಗಿರೀಶ ಹೇಳಿಕೆ ನೀಡಿದ್ದಾನೆ. ಬೆಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications