ಉಳಿದ ಮೂರು ಏಕದಿನ ಪಂದ್ಯಗಳಿಗೂ ಗಂಭೀರ್ ನಾಯಕ

ಹಿರಿಯ ಆಟಗಾರರಾದ ನಾಯಕ ಧೋನಿ, ಸೆಹವಾಗ್, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್ ಅವರು ಸರಣಿಯಿಂದ ಹೊರಗುಳಿದಿದ್ದಾರೆ. ವೇಗಿ ಶ್ರೀಶಾಂತ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಸುರೇಶ್ ರೈನಾ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಜಹೀರ್ ಖಾನ್ ಹಾಗೂ ಪ್ರವೀಣ್ ಕುಮಾರ್ ತಂಡಕ್ಕೆ ಮರಳಿದ್ದಾರೆ.
ಮೂರನೇ ಏಕದಿನ ಪಂದ್ಯಕ್ಕೆ ಮಾತ್ರ ಪ್ರತ್ಯೇಕ ತಂಡವನ್ನು ಆಯ್ಕೆ ಮಾಡಲಾಗಿದೆ. 4ನೇ ಹಾಗೂ 5 ನೇ ಪಂದ್ಯಕ್ಕೆ ಒಂದೇ ತಂಡವನ್ನು ಆರಿಸಲಾಗಿದೆ. ವೃದ್ಧಿಮಾನ್ ಸಹಾ 3 ನೇ ಪಂದ್ಯ(ಬರೋಡಾ) ಆಡುತ್ತಿದ್ದಾರೆ. 4ನೇ ಪಂದ್ಯ(ಬೆಂಗಳೂರು) ಹಾಗೂ 5ನೇ ಪಂದ್ಯ (ಚೆನ್ನೈ) ಪಂದ್ಯಗಳಿಗೆ ಪಾರ್ಥಿವ್ ಪಟೇಲ್ ವಿಕೆಟ್ ಕೀಪರ್ ಆಗಿರುತ್ತಾರೆ.
5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯಗಳನ್ನು ಗೆದ್ದು 2-0 ಮುನ್ನೆಡೆ ಪಡೆದಿದೆ. ಗಂಭೀರ್ ನಾಯಕತ್ವ ಹಾಗೂ ಬ್ಯಾಟಿಂಗ್ ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬಂದಿವೆ.
ಮೂರನೇ ಏಕದಿನ ಪಂದ್ಯಕ್ಕೆ ತಂಡ:
ಗೌತಮ್ ಗಂಭೀರ್ (ನಾಯಕ), ಎಂ. ವಿಜಯ್, ವಿರಾಟ್ ಕೊಹ್ಲಿ, ಯುವರಾಜ್, ಸೌರವ್ ತಿವಾರಿ, ವೃದ್ಧಿಮಾನ್ ಸಹಾ (ವಿ. ಕೀ.), ಆರ್. ಅಶ್ವಿನ್, ಪ್ರವೀಣ್ ಕುಮಾರ್, ವಿನಯ್ ಕುಮಾರ್, ಮುನಾಫ್ ಪಟೇಲ್, ಯೂಸುಫ್ ಪಠಾಣ್, ರವೀಂದ್ರ ಜಡೇಜ, ಜಹೀರ್ ಖಾನ್, ಆಶೀಶ್ ನೆಹ್ರಾ
ನಾಲ್ಕು ಹಾಗೂ ಐದನೇ ಪಂದ್ಯಕ್ಕೆ ತಂಡ:
ಗೌತಮ್ ಗಂಭೀರ್ (ನಾಯಕ), ಎಂ. ವಿಜಯ್, ವಿರಾಟ್ ಕೊಹ್ಲಿ, ಯುವರಾಜ್, ಸೌರವ್ ತಿವಾರಿ, ಪಾರ್ಥಿವ್ ಪಟೇಲ್, ಆರ್. ಅಶ್ವಿನ್,ಆಶೀಶ್ ನೆಹ್ರಾ, ಪ್ರವೀಣ್ ಕುಮಾರ್, ವಿನಯ್ ಕುಮಾರ್, ಮುನಾಫ್ ಪಟೇಲ್, ಜಹೀರ್ ಖಾನ್, ಯೂಸುಫ್ ಪಠಾಣ್, ರವೀಂದ್ರ ಜಡೇಜ, ರೋಹಿತ್ ಶರ್ಮಾ.












Click it and Unblock the Notifications