ಐಎಎಸ್ ಅಧಿಕಾರಿ ಜಯರಾಮರಾಜೇ ಅರಸ್ ಎತ್ತಂಗಡಿ

Jayarama Raje Urs
ಬೆಂಗಳೂರು, ಡಿ. 1 : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಜಯಚಾಮರಾಜೇ ಅರಸ್ ಅವರು ಸೇರಿದಂತೆ ಭಾರತೀಯ ಆಡಳಿತ ಸೇವೆಯ 10 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರಿಗೆ ವಹಿಸಲಾಗಿರುವ ನೂತನ ಇಲಾಖೆಗಳು ಕೆಳಗಿನಂತಿವೆ.

1) ಮೀರಾ ಸಕ್ಸೇನಾ - ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು.

2) ಕೌಶಿಕ್ ಮುಖರ್ಜಿ - ಪ್ರಧಾನ ಕಾರ್ಯದರ್ಶಿಗಳು, ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ.

3) ಡಾ. ಎಸ್ಎಂ ಜಾಮ್‌ದಾರ್ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಹಣಕಾಸು ನಿಗಮ.

4) ರಮೇಶ್ ಬಿಂದುರಾವ್ ಝಳಕಿ - ಸರ್ಕಾರದ ಕಾರ್ಯದರ್ಶಿಗಳು, ವಾರ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಧಿಕ ಪ್ರಭಾರ. ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ.

5) ಬಿ.ಆರ್. ಜಯರಾಮರಾಜೇ ಅರಸ್ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಾರ್ವಜನಿಕ ಭೂ ನಿಗಮ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್.

6) ಜಿ. ಕುಮಾರ್ ನಾಯಕ್ - ಸರ್ಕಾರದ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ (ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ).

7) ಡಾ. ಎನ್.ವಿ. ಪ್ರಸಾದ್ - ಅಪರ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

8) ಎಲ್.ವಿ. ನಾಗರಾಜನ್ - ಅಧ್ಯಕ್ಷರು, ಕರ್ನಾಟಕ ರಾಜ್ಯ ಹಣಕಾಸು ನಿಗಮ.

9) ಸುಭೀರ್ ಹರಿಸಿಂಗ್ - ಆಯುಕ್ತರು, ಬೆಂಗಳೂರು ಮಹಾನಗರ ಪ್ರಾಂತೀಯ ಅಭಿವೃದ್ಧಿ ಪ್ರಾಧಿಕಾರ (ಬಿ.ಎಂ.ಆರ್.ಡಿ.ಎ) ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ.

10) ರಾಜೀವ್ ಚಾವ್ಲಾ ಸರ್ಕಾರದ ವಿಶೇಷ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ಭೂಮಿ ಮತ್ತು ನಗರ ಸ್ವತ್ತುಗಳ ನೋಂದಣಿ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+