ಪರೀಕ್ಷೆ ಗೊಂದಲ, ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು,
ಡಿ.1: ಪರೀಕ್ಷೆ ಬರೆಯಲು ಅನುಮತಿ ನೀಡದ ಕಾರಣ, ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಗ್ಲೋಬಲ್ ಕಾಲೇಜಿನ ಆಡಳಿತ ಮಂಡಳಿಯವರು ಹಾಜರಾತಿ ಕಡಿಮೆಯಿದ್ದ ಕಾರಣ ಅಮಿತ್ ಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. id="toptextpromo">ಉತ್ತರ
ಪ್ರದೇಶ ಮೂಲದ ಅಮಿತ್‌ಕುಮಾರ್ ಯಾದವ್ (19) ಆತ್ಯಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಅಮಿತ್ ರಾಜರಾಜೇಶ್ವರಿ ನಗರದ ಗ್ಲೋಬಲ್ ಅಕಾಡೆಮಿ ತಾಂತ್ರಿಕ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಅಮಿತ್ ಮತ್ತು ಆತನ ಐವರು ಸಹಪಾಠಿಗಳು ಪಟ್ಟಣಗೆರೆಯ ಭೂಮಿಕಾ ಬಡಾವಣೆಯಲ್ಲಿ ಮನೆಯನ್ನು ಬಾಡಿಗೆ ಪಡೆದು ಒಟ್ಟಿಗೆ ವಾಸವಾಗಿದ್ದರು. ಅಮಿತ್ ಸರಿಯಾಗಿ ಕಾಲೇಜಿಗೆ ಹೋಗದ ಕಾರಣ ಹಾಜರಾತಿ ಕಡಿಮೆ ಇತ್ತು. ಆ ಕಾರಣದಿಂದ ಕಾಲೇಜು ಆಡಳಿತ ಮಂಡಳಿ ಪರೀಕ್ಷೆ ಬರೆಯಲು ಆತನಿಗೆ ಅನುಮತಿ ನೀಡಿರಲಿಲ್ಲ. ಇದರಿಂದ ಬೇಸರಗೊಂಡು ಆತ ನೇಣು ಹಾಕಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಾಯುಪಡೆಯಲ್ಲಿ
ಉದ್ಯೋಗಿಯಾಗಿರುವ ಅಮಿತ್‌ನ ತಂದೆ ವೀರೇಂದ್ರಸಿಂಗ್ ಯಾದವ್ ಅವರು ಬೀದರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.











Click it and Unblock the Notifications