ಸರ್ಕಾರದ ಭದ್ರತೆಗೆ ರೇಣುಕಾ ಆಶ್ಲೇಷ ಬಲಿ ಪೂಜೆ

Excise minister Renukacharya,
ಕುಕ್ಕೆ ಸುಬ್ರಹ್ಮಣ್ಯ, ನ.27: ಸರ್ಕಾರ ಸುಭದ್ರವಾಗಿರಲಿ, ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ಯಾವುದೇ ಕುಂದು ಬಾರದಿರಲಿ ಎಂಬ ಉದ್ದೇಶದಿಂದ ಅಬಕಾರಿ ಸಚಿವ ರೇಣುಕಾಚಾರ್ಯ ಶನಿವಾರ(ನ.27) ಬೆಳಗ್ಗೆ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿಪೂಜೆ ನೆರವೇರಿಸಿದರು.

ತನ್ನ ಒಳಿತಿಗಾಗಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪರವಾಗಿ ತಾವು ಈ ಪೂಜಾ ಕೈಂಕರ್ಯವನ್ನು ಕೈಗೊಂಡಿರುವುದಾಗಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ. ಶುಭ್ರವಸ್ತ್ರಧಾರಿಯಾಗಿದ್ದ ಅವರು ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಈ ವಿಶೇಷ ಪೂಜೆಯಲ್ಲಿ ತಲ್ಲೀನರಾಗಿದ್ದರು.

ಶುಕ್ರವಾರ ರಾತ್ರಿ 1ಗಂಟೆಗೆ ಸಚಿವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಇಂದು ಬೆಳಗ್ಗೆ ಅವರು ತುಲಾಭಾರವನ್ನು ಮಾಡಿಸಲಿದ್ದಾರೆ. ಉತ್ತಮ ಆಡಳಿತವನ್ನು ಬಿಜೆಪಿ ಸರ್ಕಾರ ನೀಡಬೇಕು. ಸರ್ಕಾರಕ್ಕೆ ಯಾವುದೇ ಆಪತ್ತು ಬಾರದಿರಲಿ ಎಂಬ ಉದ್ದೇಶದಿಂದ ಈ ಪೂಜೆ ಮಾಡಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಪರವಾಗಿ ಪೂಜೆ ಮಾಡಿಸಲು ಇವರಿಗೆ ಮುಖ್ಯಮಂತ್ರಿಗಳೇ ಆದೇಶಿಸಿದರೋ ಅಥವಾ ಸ್ವತಃ ಅವರೇ ಪೂಜೆಗೆ ಮುಂದಾದರೋ ಎಂಬುದನ್ನು ರೇಣುಕಾಚಾರ್ಯ ಬಹಿರಂಗ ಪಡಿಸಲಿಲ್ಲ. ಒಟ್ಟಿನಲ್ಲಿ ಈ ಹಿಂದೆ ಸರ್ಕಾರದ ಭದ್ರತೆಗೆ ಮುಳುವಾಗಿದ್ದನ್ನು ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+