ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಐಎಡಿಬಿಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ: ನಿರಾಣಿ

By Mahesh
|
Google Oneindia Kannada News

Minister Murugesh Nirani
ಬೆಂಗಳೂರು, ನ. 25: 'ಕೆಐಎಡಿಬಿಯನ್ನು ಮುಚ್ಚುವ ಪ್ರಶ್ನೇಯೇ ಇಲ್ಲ' ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಹಗರಣಗಳಿಂದ ಕೂಡಿರುವ ಕರ್ನಾಟಕ ಕೈಗಾರಿಕಾ ವಸಾಹತು ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಏಕೆ ಮುಚ್ಚಬಾರದು ಎಂದು ಮಂಗಳವಾರದಂದು ರಾಜ್ಯ ಹೈಕೋರ್ಟ್ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಈ ಸಚಿವರು ಇಂದು ಸ್ಷಷ್ಟೀಕರಣ ನೀಡಿದರು.

ಉದ್ಯಮಕ್ಕೆ ಮಾತ್ರ ಭೂಮಿ: ಕೆಐಎಡಿಬಿಯಿಂದ ಭೂಮಿ ಪಡೆದಿರುವ ಉದ್ಯಮಿಗಳು ಎರಡು ವರ್ಷದಲ್ಲಿ ಉದ್ಯಮ ಸ್ಥಾಪಿಸದಿದ್ದರೆ ಭೂಮಿ ವಾಪಾಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. ಬೆಂಗಳೂರು ಸುತ್ತಮುತ್ತ ಕೆಐಎಡಿಬಿಯಿಂದ ಜಮೀನು ಪಡೆದು ಉದ್ಯಮ ಸ್ಥಾಪಿಸದ ಉದ್ಯಮಿಗಳಿಂದ ಈಗಾಗಳೇ ಸುಮಾರು 480 ಎಕರೆ ಭೂಮಿಯನ್ನು ಹಿಂಪಡೆಯಲಾಗಿದೆ ಎಂದು ನಿರಾಣಿ ಹೇಳಿದರು.

"ಜಮೀನು ಹಂಚಿಕೆಯಲ್ಲಿ ತಪ್ಪುಗಳಾಗಿವೆ ನಿಜ. ಅದು ಮುಗಿದು ಹೋದ ಘಟನೆ. ಕೆಐಎಡಿಬಿಯಿಂದ ಮುಂದೆ ಅಂತಹ ತಪ್ಪುಗಳು ಆಗದ ರೀತಿಯಲ್ಲಿ ಭೂಮಿ ಹಂಚಿಕೆ ಮಾಡಲಾಗುವುದು. ಕೆಐಎಡಿಬಿಯನ್ನು ಮುಚ್ಚುವುದಿಲ್ಲ ಎಂದು ಮತ್ತೊಮ್ಮೆ ಹೇಳಿದರು. ಇನ್ನು ಮುಂದೆ ಉದ್ಯಮ ಆರಂಭಿಸುವವರಿಗೆ ಮಾತ್ರ ಆದ್ಯತೆ ಮೇರೆಗೆ ಜಮೀನು ನೀಡಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದರು.

English summary
KIADB can"t be wound up says Karnataka Minister for large and medium scale industries, Murugesh R Nirani today. Earlier on tuesday, while hearing petation on land scam, Karnataka High Court had issued notice to KIADB asking why scam hit board can"t be wound up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X