ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿಒ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ

By Mahesh
|
Google Oneindia Kannada News

Manipuri girl, a BPO employee gangraped in capital
ನವದೆಹಲಿ, ನ.25: ಬಿಪಿಒ ಉದ್ಯೋಗಿಗಳಿಗೆ ದೇಶದ ರಾಜಧಾನಿ ಸುರಕ್ಷಿತವಲ್ಲ ಎಂಬ ಕೂಗಿಗೆ ಮತ್ತೆ ಬಲ ಬಂದಿದೆ. ನ.24 ರ ಮಧ್ಯರಾತ್ರಿ ನಂತರ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ 30 ವರ್ಷದ ಮಣಿಪುರ ಮೂಲದ ಯುವತಿಯನ್ನು ನಾಲ್ಕು ಜನ ದುಷ್ಕರ್ಮಿಗಳು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ದುರ್ಘಟನೆ ನಡೆದಿದೆ.

ಎಂದಿನಂತೆ, ಆಫೀಸ್ ಕೆಲಸ ಮುಗಿದ ಮೇಲೆ ಕ್ಯಾಬ್ ಹಿಡಿದ ಯುವತಿ, ಸ್ನೇಹಿತೆಯೊಡನೆ ಮನೆ ಕಡೆಗೆ ಬಂದಾಗ ಸಮಯ ರಾತ್ರಿ ಒಂದು ಗಂಟೆ ಇಪ್ಪತ್ತು ನಿಮಿಷವಾಗಿತ್ತು. ಮನೆಯ ಕಡೆಗೆ ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ಗುಂಪೊಂದು ಆಕೆಯನ್ನು ಅಡ್ಡಗಟ್ಟಿ, ಟೆಂಪೊ ಸರಕು ಸಾಗಣೆ ವಾಹನದಲ್ಲಿ ಹೊತ್ತೊಯ್ದಿದ್ದಾರೆ. ವಾಹನ ಚಲಿಸುತ್ತಿದ್ದಂತೆಯೇ ಆಕೆಯ ಮೇಲೆ ಬಲಾತ್ಕಾರ ನಡೆದಿದೆ. ನಂತರ ಆಕೆಯನ್ನು ಮೊನ್ ಗೊಲ್ ಪುರಿ ಕೈಗಾರಿಕಾ ಪ್ರದೇಶದ ನಿರ್ಮಾನುಷ ಸ್ಥಳದಲ್ಲಿ ಎತ್ತಿ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಆಕೆಯ ಜೊತೆಗಿದ್ದ ಗೆಳತಿ ದುಷ್ಕರ್ಮಿಗಳ ಕಣ್ಣಿಗೆ ಕಾಣದಂತೆ ಬಚಾವ್ ಆಗಿ ಪೊಲೀಸರಿಗೆ ತಿಳಿಸಿದರೂ, ವಾಹನವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆ ಕಷ್ಟಪಟ್ಟು ತನ್ನ ಗೆಳತಿಗೆ ಕರೆ ಮಾಡಿ ತಾನಿರುವ ಸ್ಥಳದ ವಿವರ ನೀಡಿದ್ದಾಳೆ. ಅಲ್ಲಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆದರೆ, ಈ ದುಷ್ಕೃತ್ಯ ಪೂರ್ವ ನಿಯೋಜಿತ ಎನ್ನಲಾಗದು, ನಿಗದಿತ ವೇಳೆಗೆ ಕ್ಯಾಬ್ ನಿಂದ ಬಂದಿಳಿದ ಆಕೆ ಒಂಟಿಯಾಗಿರುವುದನ್ನು ಕಂಡ ಗುಂಪು, ಆಕೆಯ ಸಹಾಯಕ್ಕೆ ಯಾರು ಇಲ್ಲ ಎಂಬುದನ್ನು ಕಂಡು ಬಲಾತ್ಕಾರಕ್ಕೆ ಮುಂದಾಗಿರುವ ಸಾಧ್ಯತೆಯಿದೆ ಎನ್ನುತ್ತಾರೆ ಪೊಲೀಸರು.

ಬಿಪಿಒ ಉದ್ಯೋಗಿಗಳಿಗೆ ಸಿಗದ ರಕ್ಷಣೆ: ಹಗಲು ರಾತ್ರಿ ಎನ್ನದೆ ದುಡಿಯುವ ಕಾಲ್ ಸೆಂಟರ್ ಹಾಗೂ ಬಿಪಿಒ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ನಡೆಯುತ್ತಿರುವುದು ಇದೇ ಮೊದಲಲ್ಲ. ಬೆಂಗಳೂರಿನ ಎಚ್ ಪಿ ಬಿಪಿಒ ಉದ್ಯೋಗಿ ಪ್ರತಿಭಾ ಅತ್ಯಾಚಾರ ಹಾಗೂ ಕೊಲೆ ಕೇಸ್ ನಂತರ ಕಂಪೆನಿಗಳು ಹಾಗೂ ಪೊಲೀಸರು ದೇಶದಾದ್ಯಂತ ಸುರಕ್ಷಿತ ನಿಯಮಗಳನ್ನು ಬಿಗಿಗೊಳಿಸಿ ಒಂದಿಷ್ಟು ಸುಧಾರಣೆ ತಂದಿದ್ದರು. ಆದರೆ, ಈ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ದೆಹಲಿ ಮಹಿಳಾ ಉದ್ಯೋಗಿಗಳಿಗೆ ಸುರಕ್ಷಿತ ತಾಣವಲ್ಲ ಎಂಬ ಕುಖ್ಯಾತಿ ಇನ್ನಷ್ಟು ಹೆಚ್ಚಿದೆ.

English summary
Once again BPO employee became the victim of gang rape in New Delhi at midnight on Nov 24. A 30-year-old Manipuri girl was abducted and raped while returning from job.It once again proved that Delhi is not at all safe for women and raised question at the police and administration about their security arrangement in the capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X