• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ಭೇಟಿ ನೀಡಿದ ದೇವಸ್ಥಾನಗಳ ಪಟ್ಟಿ

By Mrutyunjaya Kalmat
|

ಬೆಂಗಳೂರು, ನ. 24 : ಕೊನೆಗೂ ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದ ದೇವಸ್ಥಾನಗಳಿಗೆ ಸುತ್ತ ಪ್ರದಕ್ಷಿಣೆ ಹೊಡೆದ ಯಡಿಯೂರಪ್ಪ ಅವರನ್ನು ದೇವರು, ದೇವತೆಗಳು ಮತ್ತು (ಮಠಾಧೀಶರು) ಕೈಬಿಡಲಿಲ್ಲ ಎನ್ನುವುದು ಗಮನಾರ್ಹ! ನೂರಾರು ಕೋಟಿ ರುಪಾಯಿಗಳ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಪವಾಡ ಸದೃಶ ರೀತಿಯಲ್ಲಿ ಗಂಡಾಂತರದಿಂದ ಪಾರಾಗಿದ್ದಾರೆ. ಹೆಂಗೇ? ಬೀಸುವ ದೊಣ್ಣೆಯಿಂದ ಯಡಿಯೂರಪ್ಪ ಅವರನ್ನು ಪಾರು ಮಾಡಿದ ದೈವೀ ಶಕ್ತಿ ಯಾವುದು? ಯಾವುದದು?!

ಕರ್ನಾಟಕ ಕೇರಳ ಆಂಧ್ರಪ್ರದೇಶ ಮತ್ತು ಇತರ ಅನೇಕ ರಾಜ್ಯಗಳಲ್ಲಿರುವ ದೇವಾಲಯಗಳು ಯಡ್ಡಿಗೆ ಎದುರಾಗಿದ್ದ ಸಮಸ್ಯೆಗಳನ್ನು ಗುಡ್ಡೆ ಹಾಕಿ ಬಿಸಾಕಿದವವು ಎಂಬೋಣವೆ. ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಏನಿಲ್ಲವೆಂದರೂ 56 ದೇವಸ್ಥಾನಗಳಿಗೆ ಭೇಟಿ ನೀಡಿರಬೇಕು. ಈ ಸಂಖ್ಯೆಯಲ್ಲಿ 20 ದೇವರುಗಳು ಮನೆ ದೇವರು ಇದ್ದ ಹಾಗೆ. ಕುರ್ಚಿಗೆ ಗಂಡಾಂತರ ಬಂದಾಗೆಲ್ಲ ದೇವರ ಮೊರೆ ಹೋಗಿ ಅಪಾಯದಿಂದ ಉಪಾಯವಾಗಿ ಪಾರಾಗಿದ್ದಾರೆ ನಮ್ಮ ಮಾನ್ಯ ಮುಖ್ಯಮಂತ್ರಿ.

ಅಧಿಕಾರಕ್ಕೆ ಬಂದ ನಂತರ 30 ತಿಂಗಳಲ್ಲಿ ಇವರು ಭೇಟಿ ನೀಡಿದ ದೇವಸ್ಥಾನಗಳ ಸಂಕ್ಷಿಪ್ತ ಪಟ್ಟಿ ಕೆಳಕಂಡಂತಿದೆ. ದೇವಸ್ಥಾನಕ್ಕೆ ಭೇಟಿ ಮಾಡುವುದಲ್ಲದೇ ಕನಿಷ್ಠ 1 ಕೋಟಿಯಿಂದ 10 ಕೋಟಿ ರುಪಾಯಿವರೆಗೂ ದೇವಸ್ಥಾನಕ್ಕೆ ಕಾಸನ್ನು ಕಾಣಿಕೆ ಅಥವಾ ದಕ್ಷಿಣೆಯಾಗಿ ನೀಡಿದ್ದಾರೆ. ಇದಲ್ಲದೆ, ಜಾತಿ ಬೇಧ ಎಣಿಸದೆ ಎಲ್ಲ ಜಾತಿ ವರ್ಗಳ ದೇವಸ್ಥಾನಕ್ಕೆ ಶಿರ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ಬನ್ನಿ, ಕೆಲವು ದೇವಸ್ಥಾನಗಳಿಗೆ ನಾವೂ ಭೇಟಿ ಕೊಡೋಣ. ನಮ್ಮ ಸಮಸ್ಯೆಗಳೂ ಪಾರಾಗಲಿ. ಅದಕ್ಕೇನಂತೆ!

* ಪುಟ್ಟಪರ್ತಿ ಸಾಯಿಬಾಬಾ ದೇವಸ್ಥಾನ

* ಮಂತ್ರಾಲಯ

* ರಾಘವೇಂದ್ರ ಸ್ವಾಮಿ ಮಠ, ನವದೆಹಲಿ

* ಗಾಳಿ ಆಂಜನೇಯ ದೇವಸ್ಥಾನ, ಬೆಂಗಳೂರು

* ಗವಿಗಂಗಾಧರೇಶ್ವರ ದೇವಸ್ಥಾನ, ಬೆಂಗಳೂರು

* ವೈಷ್ಣೋ ದೇವಿ, ಜಮ್ಮು ಕಾಶ್ಮೀರ

* ಕಣ್ಣೂರಿನ ರಾಜರಾಜೇಶ್ವರಿ ದೇವಸ್ಥಾನ

* ಕಡಲೂರಿನ ಹಯಗ್ರೀವ ದೇವಸ್ಥಾನ

* ಶ್ರೀಕಾಳಹಸ್ತಿ, ಆಂಧ್ರಪ್ರದೇಶ

* ತಿರುಪತಿ ವೆಂಕಟೇಶ್ವರ, ತಿರುಮಲ

* ಶಿರಡಿ ಸಾಯಿಬಾಬಾ, ಮಹಾರಾಷ್ಟ್ರ

* ಕುಕ್ಕೆ ಸುಬ್ರಮಣ್ಯ, ದಕ್ಷಿಣ ಕನ್ನಡ

* ಹಲಸೂರು ಸೋಮೇಶ್ವರ ದೇವಸ್ಥಾನ, ಬೆಂಗಳೂರು

* ಬಸವನಗುಡಿ ದೊಡ್ಡಗಣೇಶ ದೇವಸ್ಥಾನ

* ತುಮಕೂರು ಸಿದ್ಧಗಂಗಾ ಮಠ

* ಹುಬ್ಬಳ್ಳಿ ಮೂರುಸಾವಿರ ಮಠ

* ಹುಬ್ಬಳ್ಳಿ ಸಿದ್ದಾರೂಢ ಮಠ

* ಮೈಸೂರು ಚಾಮುಂಡೇಶ್ವರಿ

* ವಿದ್ಯಾಪೀಠದ ಶ್ರೀ ಕೃಷ್ಣ ಮಠ, ಬೆಂಗಳೂರು

* ಬಸವನಗುಡಿ ಶ್ರೀ ರಾಘವೇಂದ್ರ ಮಠ

* ಉಡುಪಿ ಶ್ರೀಕೃಷ್ಣ ಮಠ

* ಕಾಡುಮಲ್ಲೇಶ್ವರ ದೇವಸ್ಥಾನ, ಮಲ್ಲೇಶ್ವರಂ

* ಬಾಳೆಹೊನ್ನೂರಿನ ರಂಭಾಪುರಿ ಮಠ

* ಸರ್ಕಲ್ ಮಾರಮ್ಮ, ಯಶವಂತಪುರ

* ಗದಗಿನ ತೋಂಟದಾರ್ಯ ಮಠ

* ವೀರೇಶ್ವರ ಆಶ್ರಮ ಗದಗ

* ಸಾಯಿಬಾಬಾ ಮಂದಿರ, ತ್ಯಾಗರಾಜ ನಗರ

ಪಟ್ಟಿ ಮಾಡುವಾಗ ನಾವು ಕೆಲವು ದೇಗುಲಗಳ ಹೆಸರುಗಳನ್ನು ಮರೆತಿರಬಹುದು. ನಿಮಗೆ ಗೊತ್ತಿದ್ದರೆ ಸೇರಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BS Yeddyurappa visited more than 50 Hindu temples in his 30 months rule as Chief Minister of Karnataka. He offered prayers, donations and grants to appease deities to bless him with health, wealth and political prosperity. Here goes the list of temples he visited across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more